ಕಾರ್ಕಳ: ಕಾರ್ಕಳ ತಾಲೂಕು ಕಸಬಾ ಗ್ರಾಮದ ನಿಟ್ಟೆ ಗಾಜ್ರಿಯಾ ಆಸ್ಪತ್ರೆ ಬಳಿಯ ಸಾರ್ವಜನಿಕ ಹಾಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಜಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 9 ಜನ ಆರೋಪಿಗಳು ಸೇರಿದಂತೆ 11,000 ರೂ. ನಗದು ಹಾಗೂ ಆಟಕ್ಕೆ ಬಳಸಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಸೋಮನಾಥ್ ಪಾಠಕ್ (77) ,ಜಯಂತ್ (60) , ಸತೀಶ್ (49), ಉದಯ ಭಿಡೆ,(63) , ಪ್ರಕಾಶ್ (50) ಅನಂತ, (65), ಸೀತಾರಾಮ ( 63) ,ವೆಂಕಟರಮಣ ( 69) ,ದಿನೇಶ್ ( 68) ಎಂಬವರು ಶನಿವಾರ ಆಸ್ಪತ್ರೆ ಬಳಿಯ ಹಾಡಿಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಉಲಾಯಿ, ಪಿದಾಯಿ ಎಂಬ ಹೆಸರಿನ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವಾಗ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ನಗದು ಸಹಿತ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
