Share this news

ಹುಬ್ಬಳ್ಳಿ: ಭೂಗತ ಪಾತಕಿ, ಶಾರ್ಪ್ ಶೂಟರ್, ನಟೋರಿಯಸ್ ಪಾತಕಿ ಬಚ್ಚಾಖಾನ್ ನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಈತ ಬೆಂಗಳೂರಿನ ಉದ್ಯಮಿ ಕೊಲೆ ಸೇರಿ 3 ಪ್ರಕರಣಗಳ ಆರೋಪಿ ಆಗಿದ್ದಾನೆ. ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬಾರಾವ್ ಕೊಲೆ ಪ್ರಕರಣದಲ್ಲಿ ಬಚ್ಚಾಖಾನ್ ಗೆ ಜೀವಾವಧಿ ಶಿಕ್ಷೆಯಾಗಿತ್ತು. ಬಳಿಕ ಪೆರೋಲ್ ಮೇಲೆ ಹೊರ ಬಂದಿದ್ದ ಬಚ್ಚಾಖಾನ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರಂಭದಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇದ್ದ ಈತನನ್ನು ಬಳಿಕ ಹಿಂಡಲಗಾ ಜೈಲಿನಲ್ಲಿ ಬೇರೆ ಬೇರೆ ಪ್ರಕರಣದ ಕುಖ್ಯಾತ ರೌಡಿಗಳು, ಭೂಗತ ಪಾತಕಿಗಳು ಇರುವ ಹಿನ್ನೆಲೆಯಲ್ಲಿ 2013ರಲ್ಲಿ ಮೈಸೂರು ಜೈಲಿಗೆ ಸ್ಥಳಾಂತರಿಸಲಾಗಿತ್ತು. ನಂತರ 2017ರಲ್ಲಿ ಧಾರವಾಡ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಧಾರವಾಡ ಜೈಲಿನಿಂದಲೇ ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿದ್ದ ಈತನನ್ನು 2021ರಲ್ಲಿ ಧಾರವಾಡದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. 3 ವರ್ಷಗಳಿಂದ ಬಳ್ಳಾರಿ ಜೈಲಿನಲ್ಲಿದ್ದು, ಪೆರೋಲ್ ಮೇಲೆ ಹೊರಗಿದ್ದ ಆತನನ್ನು ಬೆಂಗಳೂರಿನಲ್ಲಿ ಬಂಧಿಸಿ ನಿನ್ನೆ ಹುಬ್ಬಳ್ಳಿಗೆ ಕರೆತರಲಾಗಿದೆ. ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳಿಂದ ನಟೋರಿಯಸ್ ಬಚ್ಚಾಖಾನ್ ವಿಚಾರಣೆ ಮಾಡಲಾಗುತ್ತಿದೆ.

ನನ್ನ ವಿರುದ್ಧ ಸುಳ್ಳು ಮೊಕದ್ದಮೆ ಎಂದ ಬಚ್ಚಾಖಾನ್ :
ಪೊಲೀಸರು ಬಂಧಿಸುತ್ತಿದ್ದAತೆ ಹುಬ್ಬಳ್ಳಿಯ ಉಪನಗರ ಠಾಣೆ ಮುಂದೆ ಬಚ್ಚಾಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖಕ್ಕೆ ಹಾಕಿದ್ದ ಮಾಸ್ಕ್ ತೆಗೆದು ಸುಳ್ಳು ಕೇಸ್ ಎಂದಿದ್ದಾರೆ. ನನ್ನ ವಿರುದ್ಧ ಸುಳ್ಳು ಮೊಕದ್ದಮೆ ಹಾಕಿದ್ದಾರೆ ಎಂದು ಕ್ಯಾಮರಾ ಕಂಡ ಕೂಡಲೇ ಮಾಸ್ಕ್ ತೆಗೆದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಕಳೆದ ತಿಂಗಳು 18 ರಿಂದ 20 ರಂದು ಮಂಟೂರ್ ಗ್ರಾಮದ ವ್ಯಕ್ತಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ. ಜಮೀನು ಮಾರುವ ವಿಚಾರದಲ್ಲಿ ಆತನಿಗೆ ಗೊಂದಲ ಇರುತ್ತೆ. ಹಣಕಾಸಿನ ವಿಷಯವಾಗಿ ಕೆಲವರನ್ನ ಭೇಟಿ ಮಾಡಿರುತ್ತಾನೆ. ಎರಡು ನಂಬರ್‌ಯಿAದ ಬೇರೆ ಬೇರೆ ಸಮಯದಲ್ಲಿ ಕರೆಗಳು ಬಂದಿದ್ದು, ವ್ಯಕ್ತಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.
ದೈನAದಿನ ಆತನ ಚಟುವಟಿಕೆ ಬಗ್ಗೆ ಹೇಳಿ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಡಲಾಗಿರುತ್ತೆ. ಪ್ರಕರಣ ದಾಖಲಿಸಿಕೊಂಡು ಸಿಸಿಬಿಯಿಂದ ತನಿಖೆ ಆರಂಭಿಸಲಾಗಿತ್ತು. ತನಿಖೆಯಲ್ಲಿ ಸಿಕ್ಕ ಸಾಕ್ಷಿ ಪ್ರಕಾರ ಎಂಟು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ಏಳು ಜನರನ್ನ ಅರೆಸ್ಟ್ ಮಾಡಿದ್ದೇವೆ. ಇನ್ನೊಬ್ಬನ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ತಾಂತ್ರಿಕ ಸಾಕ್ಷಿ ಸೇರಿ ಹಲವು ಸಾಕ್ಷಿಗಳ ಆಧಾರದ ಮೇಲೆ ತನಿಖೆ ಮಾಡಲಾಗುತ್ತಿದೆ. ದೂರು ನೀಡಿದವರು ಸುಮಾರು 70 ವರ್ಷದ ವೃದ್ಧ. ಅವರ ಕುಟುಂಬದ ಸದಸ್ಯರು ಸಹ ಬೇರೆ ಬೇರೆ ಕಡೆ ಇದ್ದಾರೆ. ಅವರ ಹಿಂದೆ ಅನುಮಾನಾಸ್ಪದವಾಗಿ ತಿರುಗುತ್ತಿದ್ದಾರೆ. ಹೀಗಾಗಿ ದೂರುದಾರರ ಹೆಸರನ್ನ ನಾವು ಬಹಿರಂಗ ಪಡಿಸಲು ಆಗುವುದಿಲ್ಲ. ಒಬ್ಬರು ಎಸಿಪಿ, ಇಬ್ಬರು ಇನ್ಸ್ಪೆಕ್ಟರ್ ರಿಂದ ತಂಡ ರಚಿಸಿ ಆರೋಪಿ ವಶಕ್ಕೆ ಪಡೆದಿದ್ದೇವೆ. ಬೆಂಗಳೂರಿನಲ್ಲಿ ನಿನ್ನೆ ವಶಕ್ಕೆ ಪಡೆದು ವಿಚಾರಣೆ ನಡೆದಿದೆ. ಆರೋಪಿ ಆಗಸ್ಟ್ 2 ರಿಂದ ಪೆರೋಲ್ ಮೇಲೆ ಹೊರಗಡೆ ಇದ್ದರು ಎಂದು ಗೊತ್ತಾಗಿದೆ. ಹಳೇ ಹುಬ್ಬಳಿ ಪೊಲೀಸ್ ಠಾಣೆಯಲ್ಲಿ ಫ್ರೂಟ್ಸ್ ಇರ್ಫಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಈತ. ಬೆಂಗಳೂರಿನ ಒಂದು ಕೊಲೆ ಪ್ರಕರಣ ಈತನ ಮೇಲಿದೆ. ಇನ್ನು ಹಲವರಿಗೆ ಬೆದರಿಕೆ ಕರೆ ಹೋಗಿದೆ ಅನ್ನೋದು ವಿಚಾರಣೆಯಲ್ಲಿ ತಿಳಿದಿದೆ. ಇದನ್ನ ಹೊರತು ಪಡಿಸಿ ಬೆದರಿಕೆ ಕರೆ ಬಂದರೆ ನಮಗೆ ಮಾಹಿತಿ ನೀಡಬಹುದು ಎಂದು ಹೇಳಿದ್ದಾರೆ.

                        

                          

                        

                       

Leave a Reply

Your email address will not be published. Required fields are marked *