
ಕಾರ್ಕಳ, ಏ.04: ನಗರದ ಆನೆಕೆರೆ ಪುಲ್ಕೇರಿ ಬೈಪಾಸ್ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ರಸ್ತೆ ಅಗಲೀಕರಣಕ್ಕಾಗಿ ಮೋರಿ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಯಾವುದೇ ಮುನ್ಸೂಚನಾ ಫಲಕ ಅಳವಡಿಸದ ಹಿನ್ನಲೆಯಲ್ಲಿ ಪದೇಪದೇ ಅಪಘಾತ ಸಂಭವಿಸುತ್ತಿದೆ. ಶನಿವಾರ ಮುಂಜಾನೆ ಕಾರ್ಕಳ ಕಡೆಯಿಂದ ಬೈಪಾಸ್ ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿಯಾಗಿದೆ.
ಕಾಮಗಾರಿ ನಡೆಯುತ್ತಿರುವ ವಿಚಾರ ಅರಿವಿಗೆ ಬಾರದೇ ವೇಗವಾಗಿ ಬಂದ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ನಿರ್ಮಾಣ ಹಂತದ ಮೋರಿಗೆ ಡಿಕ್ಕಿಯಾಗಿ ಕಾರಿನ ಮುಂಭಾಗ ಜಖಂಗೊAಡಿದೆ.ಈ ಭಾಗದಲ್ಲಿ ವಾಹನಗಳು ವೇಗವಾಗಿ ಸಾಗುತ್ತಿರುವ ಹಿನ್ನಲೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಸೂಕ್ತ ಮುನ್ನೆಚರಿಕೆ ವಹಿಸಬೇಕಿದೆ.















.
.
.
.
.
.
.
.
.
.
