Share this news

ಉಪ್ಪಿನಂಗಡಿ : ಅಪ್ರಾಪ್ತ ವಿದ್ಯಾರ್ಥಿನಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ ಆರೋಪದ ಮೇಲೆ ವಿಟ್ಲ ನಿವಾಸಿ ಸತೀಶ್ (38) ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆರೋಪಿಯು ಜೂನ್ 14 ರಂದು ಸ್ಥಳೀಯ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಪರಿಚಯಮಾಡಿಕೊಂಡಿದ್ದ, ಬಳಿಕ ಮೊಬೈಲ್ ಪೋನ್ ನಂಬರ್ ಪಡೆದು ಆತ್ಮೀಯತೆ ಬೆಳೆಸಿದ್ದಾನೆ. ಈ ನಡುವೆ ಜುಲೈ 21 ರಂದು ಆಕೆಯನ್ನು ನೆಲ್ಯಾಡಿಗೆ ಬರಲು ಹೇಳಿ, ನೆಲ್ಯಾಡಿಗೆ ಬಂದ ಆಕೆಯನ್ನು ಪಿಕಪ್ ವಾಹನದಲ್ಲಿ ಬಜತ್ತೂರು ಗ್ರಾಮದ ಕಾಂಚನ ಎಂಬಲ್ಲಿನ ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಮಾತ್ರವಲ್ಲದೇ ಈ ವಿಚಾರವನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಸಂತ್ರಸ್ತ ವಿದ್ಯಾರ್ಥಿನಿಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

 

 

 

    

                       in 

                          

                        

                       

Leave a Reply

Your email address will not be published. Required fields are marked *