Share this news

ಕಾರ್ಕಳ: ಒಬ್ಬ ವ್ಯಕ್ತಿಯ ಯಶಸ್ಸಿಗೆ, ಕನಸನ್ನು ನನಸು ಮಾಡಲು ಪರಿಸ್ಥಿತಿ ಮುಖ್ಯವಲ್ಲ ಮನಸ್ಥಿತಿ ಮುಖ್ಯ. ಸಕಾರಾತ್ಮ ಆಲೋಚನೆಗಳಿಗೆ ಸೋಲಿಲ್ಲ. ಯಾರಿಗೆ ಹೆತ್ತವರ ಆಲೋಚನೆಗಳು ಅರ್ಥವಾಗುತ್ತವೆಯೋ ಅಂತವರು ಎಂದೂ ಹಾದಿ ತಪ್ಪಲು ಸಾದ್ಯವಿಲ್ಲ ಎಂದು ಸ.ಪ.ಪೂ.ಕಾಲೇಜು ಸದಲಗ, ಚಿಕ್ಕೋಡಿ ಇಲ್ಲಿನ ಉಪನ್ಯಾಸಕ ವೀರೇಶ್ ಗದಿಗೆಪ್ಪಗೌಡ ಪಾಟೀಲ್ ನುಡಿದರು.

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-40ರಲ್ಲಿ “ಸಕಾರಾತ್ಮಕ ಆಲೋಚನೆ ಸಾಧನೆಗೆ ಪ್ರೇರಣೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಕನಸನ್ನು ನನಸು ಮಾಡಲು ಸಕಾರಾತ್ಮಕ ಆಲೋಚನೆ ಮುಖ್ಯ. ನಮ್ಮನ್ನು ತುಂಬಾ ಸುಲಭವಾಗಿ ಸೋಲಿಸುವ ಆಯುಧ ಭಯ. ನಮಗೆ ನಾವೇ ಪ್ರೇರಣೆಯನ್ನು ತುಂಬ ಬೇಕು ಎನ್ನುತ್ತಾ ಅನೇಕ ಮಹಾತ್ಮರ ಜೀವನ ಸಂದೇಶಗಳನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಶ್ರೀ ಅನಿಲ್ ಕುಮಾರ್ ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲ ಶ್ರೀ ದಿನೇಶ್ ಎಂ ಕೊಡವೂರ್, ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ, ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ, ಹಿತೈಷಿ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ವಿನಯಚಂದ್ರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *