Share this news

ಮುನಿಯಾಲು ಜಿ. ಎಸ್. ಬಿ. ಮಹಿಳಾ ಮಂಡಳಿ ವತಿಯಿಂದ 34 ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವ್ರತ

 

ಹೆಬ್ರಿ: ಮುನಿಯಾಲು ಜಿ. ಎಸ್. ಬಿ. ಮಹಿಳಾ ಮಂಡಳಿ ವತಿಯಿಂದ 34 ನೇ ವರ್ಷದ ವರಮಹಾಲಕ್ಷ್ಮಿ ವ್ರತವು ಮುನಿಯಾಲು ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನೆರವೇರಿತು.
ಮಹಿಳಾ ಮಂಡಳಿ ಅಧ್ಯಕ್ಷೆ ಸುಧಾ ಗಣಪತಿ ಪೈ ಮುದ್ರಾಡಿ, ಉಪಾಧ್ಯಕ್ಷರಾದ ಲತಾ ದಾಮೋದರ್ ಪೈ, ಕೋಶಾಧಿಕಾರಿಗಳಾದ ಮಹಾಲಸ ಕೃಷ್ಣಕಾಂತ ನಾಯಕ್ ಹಾಗೂ ಕಾರ್ಯದರ್ಶಿಗಳಾದ ರಜನಿ ರಾಮ್ ಪೈ ಇವರ ನೇತೃತ್ವದಲ್ಲಿ ಸಮಾಜದ ಸುಮಾರು 200 ಕ್ಕೂ ಮಿಕ್ಕಿ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಅದ್ದೂರಿಯಾಗಿ ನೆರವೇರಿತು.
ಪೂಜಾ ವಿಧಿವಿಧಾನಗಳನ್ನು ಪ್ರಧಾನ ಅರ್ಚಕರಾದ ವಾಮನ್ ಭಟ್ ಇವರು ನೆರವೇರಿಸಿದರು ಹಾಗೂ ಸಮಸ್ತ ಸಮಾಜ ಭಾಂದವರಿಗೆ ಪೂಜೆಯ ಬಳಿಕ ಏಕಾದಾಶಿಯ ಪ್ರಯುಕ್ತ ಭೋಜನದ ಬದಲಿಗೆ ಫಾಲಾಹಾರದ ವ್ಯವಸ್ಥೆಯನ್ನು ನೆರವೇರಿಸಲಾಯಿತು

==============================

ಕಾಡುಹೊಳೆ ಜಂಗಮೇಶ್ವರ ಮಠದಲ್ಲಿ ವರಮಹಾಲಕ್ಷ್ಮೀ ವೃತ ಪೂಜೆ

ಹೆಬ್ರಿ : ಕಾಡುಹೊಳೆ ಜಂಗಮೇಶ್ವರ ಮಠದಲ್ಲಿ 15ನೇ ವರ್ಷದ ವರಮಹಾಲಕ್ಷ್ಮೀ ವೃತ ಪೂಜೆಯು ಶ್ರೀ ಮಠದ ಅರ್ಚಕ ವಿದ್ವಾನ್ ರಾಘವೇಂದ್ರ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಿತು.
ಮುತ್ತೈದೆಯರು ಮನೆ ಮನೆಗಳಲ್ಲಿ ಭಕ್ತಿ ಶ್ರದ್ಧೆಯಿಂದ ದೈನಂದಿನ ದಿನಗಳಲ್ಲಿ ಲಕ್ಷ್ಮಿಯನ್ನು ಆರಾಧಿಸಿದಲ್ಲಿ ಸುಭೀಕ್ಷೆಯಿಂದ ಜೀವನ ನಡೆಸಲು ಸಾಧ್ಯ ಎಂದು ರಾಘವೇಂದ್ರ ಭಟ್ ಉಪನ್ಯಾಸ ನೀಡಿದರು. ಮುನಿಯಾಲು, ಕಾಡುಹೊಳೆ ಪರಿಸರದ ನೂರಾರು ಮಂದಿ ಮಹಿಳೆಯರು ವೃತ ಪೂಜೆಯಲ್ಲಿ ಭಾಗವಹಿಸಿದರು. ಕಾಡುಹೊಳೆ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಸದಸ್ಯರು ಸಹಕರಿಸಿದರು.

 

=======================================

 

ಹೆಬ್ರಿ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆ

 

ಹೆಬ್ರಿ: ಪಿ ಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಸಂಸ್ಥೆಯ ಅನ್ನಪೂರ್ಣ ಸಭಾಂಗಣದಲ್ಲಿ ನಡೆಯಿತು.
ಮಾತೆಯರು ಭಜನೆ, ಕುಣಿತ ಭಜನೆ, ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸತೀಶ್ ಪೈ, ಶೈಲೇಶ್ ಕಿಣಿ, ಗುರುದಾಸ್ ಶೆಣೈ , ಮಾತೃ ಮಂಡಳಿಯ ಸದಸ್ಯರು, ಪ್ರಾಥಮಿಕ ಶಾಲಾ ಶಿಕ್ಷಕಿ ಮೀನಾಕ್ಷಿ, ಸಂಸ್ಥೆಯ ಮುಖ್ಯಸ್ಥರಾದ ಅರುಣ್ ಕುಮಾರ್, ಅಪರ್ಣಾ ಆಚಾರ್, ಅನಿತಾ, ಶಕುಂತಲಾ, ಸಂಸ್ಥೆಯ ಮೇಲ್ವಿಚಾರಕರಾದ ರಾಘವೇಂದ್ರ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

 

=================================

ಶಿವಪುರದಲ್ಲಿ ಸಾರ್ವಜನಿಕ ವರಮಹಾಲಕ್ಷಿ ಪೂಜೆ

ಕುಲಾಲ ಸಂಘ ಶಿವಪುರ (ರಿ)ದ ಮಹಿಳಾ ಘಟಕದ ನೇತೃತ್ವದಲ್ಲಿ ಸಾರ್ವಜನಿಕ ವರಮಹಾಲಕ್ಷಿ ಪೂಜೆ ಇಂದು ನಡೆಯಿತು. ಶಿವಪುರದ ಸರ್ವಜನ ಬಂಧುಗಳು ಪೂಜೆಯಲ್ಲಿ ಪಾಲ್ಗೊಂಡರು

 

 


                        

                          

                        

                          

 

`

Leave a Reply

Your email address will not be published. Required fields are marked *