ಕಾರ್ಕಳ: ಮಹಾಲಿಂಗೇಶ್ವರ ಮಹಿಳಾ ಮಂಡಲ(ರಿ.), ಪತ್ತೊಂಜಿಕಟ್ಟೆ, ಪೆರ್ವಾಜೆ, ಕಾರ್ಕಳ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ವೀಣಾ ರಾಜೇಶ್ ಭಂಡಾರಿ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮಹಾಲಿಂಗೇಶ್ವರ ಯುವಕ ಮಂಡಲ(ರಿ.) ಹಾಗೂ ಮಹಿಳಾ ಮಂಡಲ(ರಿ)ದ 2023-2024 ನೇ ಸಾಲಿನ ಜಂಟಿ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಸದಸ್ಯರಾದ ಸುಭಾಸ್ ಸುವರ್ಣ ಇವರು ವಹಿಸಿದ್ದರು. ಮಹಿಳಾ ಮಂಡಲದ ಉಪಾಧ್ಯಕ್ಷರಾಗಿ ಸುಜಯಾ ಮೋಹನ್, ಕಾರ್ಯದರ್ಶಿಯಾಗಿ ಮಮತಾ ಸುವರ್ಣ, ಜತೆಕಾರ್ಯದರ್ಶಿಯಾಗಿ ರೂಪಾ ಶೆಟ್ಟಿ, ಕೋಶಾಧಿಕಾರಿಯಾಗಿ ಶ್ರೀಮತಿ ಶುಭಲಕ್ಷ್ಮೀ ಬಂಗೇರ, ಸಾಂಸ್ಕೃತಿಕ ಕಾರ್ಯದರ್ಶಿ ಅಮಿತಾ ಸಾಲಿಯಾನ್, ಕ್ರೀಡಾ ಕಾರ್ಯದರ್ಶಿ ಶುಭಾ ಕಿಶೋರ್ ಆಯ್ಕೆಯಾದರು. 20 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.















