ಹೆಬ್ರಿ: ಅಮೃತ ಭಾರತಿ ಶಾಲೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಚಟುವಟಿಕೆಯನ್ನು ಮಾಡುತ್ತಿದೆ.ಭಾರತೀಯ ಸಂಸ್ಕೃತಿಯ ಶಿಕ್ಷಣವನ್ನು ನೀಡುತ್ತಿದೆ .ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಮುಖ್ಯವಾಗಿ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಅಗತ್ಯವಾದ ವಾತಾವರಣವನ್ನು ಮಾಡಿಕೊಡುತ್ತಿದೆ ಎಂದು ಆರಕ್ಷಕ ಠಾಣೆ ಹೆಬ್ರಿಯ A.SI . ದಯಾಕರ್ ಪ್ರಸಾದ್ ನುಡಿದರು.
ಅವರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಆಗಸ್ಟ್ 24 ರಂದು ನಡೆದ ಪ್ರಾಂತ ಮಟ್ಟದ ವಾಲಿಬಾಲ್ ಪಂದ್ಯಾಟದ ಜ್ಯೋತಿಯನ್ನು ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಪಾಂಡುರಂಗ ಪೈ ಸಿದ್ದಾಪುರ ಅಧ್ಯಕ್ಷತೆ ವಹಿಸಿದ್ದರು
ಅಮೃತ ಭಾರತಿ ಟ್ರಸ್ಟನ ಅಧ್ಯಕ್ಷರು CA.ಎಂ . ರವಿರಾವ್ ಹೆಬ್ರಿ , ಕಾರ್ಯದರ್ಶಿ ಶ್ಗುರುದಾಸ್ ಶೆಣೈ ,ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷರು ಶೈಲೇಶ್ ಕಿಣಿ , ಪಾಂಡುರಂಗ ರಮಣ ನಾಯಕ್ ಪದವಿ ಪೂರ್ವ ಕಾಲೇಜಿನ ಸಂಚಾಲಕರು ರಾಜೇಶ್ ನಾಯಕ್ , ಟ್ರಸ್ಟ್ ನ ಸದಸ್ಯರು ಬಾಲಕೃಷ್ಣ ಮಲ್ಯ, ಭಾಸ್ಕರ್ ಜೋಯಿಸ್ ಹೆಬ್ರಿ . ಅಮೃತ ಭಾರತಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಪರ್ಣ ಆಚಾರ್ , ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಕುಂತಲಾ , ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಅಮರೇಶ್ ಹೆಗ್ಡೆ , ವಿದ್ಯಾ ಕೇಂದ್ರದ ಪ್ರಾಂಶುಪಾಲರು ಅರುಣ್ ಎಚ್. ವೈ . ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ಉಪಸ್ಥಿತರಿದ್ದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು .
ಜಿಲ್ಲಾ ಶಾರೀರಿಕ ಪ್ರಮುಖ್ ವಿಜಯ ಕುಮಾರ್ ಶೆಟ್ಟಿ ಸ್ವಾಗತಿಸಿದರು , ಧನ್ಯವಾದ ನಿಶಾನ್ ಗುರೂಜಿ , ಅನಿತಾ ಮಾತಾಜಿ ನಿರೂಪಿಸಿದರು .ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಿಂದ 28 ತಂಡಗಳು ಭಾಗವಹಿಸಿದ್ದರು
`