ಹೆಬ್ರಿ,ಅ.13: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೆಬ್ರಿ ಘಟಕದ ಮುದ್ರಾಡಿ ಮಂಡಲದ ವತಿಯಿಂದ ಸಂಘದ ಶತಾಬ್ದಿ ಪ್ರಯುಕ್ತ ಆಕರ್ಷಕ ವಿಜಯ ದಶಮಿಯ ಪಥ ಸಂಚಲನವು ಮುನಿಯಾಲು ವೀರ ಸಾವರ್ಕರ್ ಮೈದಾನದಲ್ಲಿ ಭಾನುವಾರ ನಡೆಯಿತು.
ಮುನಿಯಾಲಿನ ಪೇಟೆಯಲ್ಲಿ ಸುಮಾರು 333 ಪೂರ್ಣ ಗಣವೇಶಧಾರಿಗಳಿಂದ ಬ್ಯಾಂಡ್ ನೊಂದಿಗೆ ಪಥ ಸಂಚಲನ ಮೆರವಣಿಗೆ ನಡೆಯಿತು.