ಕಾರ್ಕಳ: ಅಮಾಯಕ ಬಡ ಯುವತಿ ಮೇಲೆ ಆಗಿರುವ ಹೀನಾಯ ಕೃತ್ಯವನ್ನು ಭೋವಿ ಸಮುದಾಯವು ಖಂಡಿಸುತ್ತಿದ್ದು ಅತ್ಯಾಚಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಶಿವಕುಮಾರ್ ಎಚ್ಚರಿಕೆ ನೀಡಿದರು.
ಕಾರ್ಕಳದ ಹೋಟೆಲ್ ಪ್ರಕಾಶ್ ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬದುಕು ಕಟ್ಟಿಕೊಳ್ಳಲು ಕಾರ್ಕಳಕ್ಕೆ ವಲಸೆ ಬಂ ಹಿಂದುಳಿದ ಸಮಾಜದ ಮೇಲೆ ಇಂಥ ನೀಚ ಕೃತ್ಯ ನಡೆಯುತ್ತಿರುವುದು ಖಂಡನೀಯ ಎಂದರು.
ಡ್ರಗ್ಸ್ ಮಾಫಿಯಾವೇ ಅತ್ಯಾಚಾರ ಪ್ರಕರಣಕ್ಕೆ ಮೂಲ ಕಾರಣ. ಡ್ರಗ್ಸ್ ದಂಧೆ ತಾಲೂಕಿನಾದ್ಯಂತ ತನ್ನ ಕದಂಬ ಬಾಹು ಚಾಚಿದ್ದು ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಟ್ಟ ಹಾಕಬೇಕಾಗಿದೆ. ಅಲ್ಲದೇ ಈ ಜಾಲದ ಹಿಂದಿರುವ ಕೈಗಳನ್ನು
ಯುವತಿ ಪ್ರಜ್ಞಾಹೀನ ಹೊರಗೆಳೆಯದಿದ್ದಲ್ಲಿ ಇನ್ನಷ್ಟು ಅಮಾಯಕ ಬಡ ಹೆಣ್ಣು ಮಕ್ಕಳು ಬಲಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ಧಿಗೋಷ್ಠಿಯಲ್ಲಿ ಜಗದೀಶ್, ಆನಂದ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
`