Share this news

ಬಂಟ್ವಾಳ : ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕಳವು ಪ್ರಕರಣಗಳ ಪತ್ತೆಯಲ್ಲಿ ತೊಡಗಿದ್ದ ವಿಟ್ಲ ಠಾಣಾ ಅಪರಾಧ ತಂಡದ ಸಿಬ್ಬಂದಿಗಳು 29 ರಂದು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್‌ ನಲ್ಲಿ ಇಬ್ಬರು ಕಳ್ಳರನ್ನು ಬಂಧಿಸಿದ್ದು ವಿಚಾರಿಸಲಾಗಿ ವಿಟ್ಲ ಠಾಣೆಯ ಮಿತ್ತೂರು, ಕೊಡಾಜೆ ಮನೆ ಕಳವು ಎರಡು ಪ್ರಕರಣಗಳಲ್ಲಿ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿ ಕಳವು ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

ಉಳ್ಳಾಲ ತಾಲೂಕು ಬೋಳಿಯಾರು ಗ್ರಾಮದ ಮಹಮ್ಮದ್‌ ರಿಯಾಜ್‌ ಧರ್ಮನಗರ ನಿವಾಸಿ ಹಸನಬ್ಬ ಪುತ್ರ ಮಹಮ್ಮದ್ ರಿಯಾಜ್‌ ಹಸನಬ್ಬ ಮತ್ತು ಉಳ್ಳಾಲ ಹಳೆಕೋಟೆ ನಿವಾಸಿ ಅಬ್ದುಲ್ ರಹಿಮಾನ್ ಪುತ್ರ ಮೊಹಮ್ಮದ್‌ ಇಂತಿಯಾಜ್ ಬಂಧಿತ ಖದೀಮರು.

ಆರೋಪಿಗಳ ಪೈಕಿ ಮಹಮ್ಮದ್‌ ರಿಯಾಜ್‌ ಹಸನಬ್ಬ ಎಂಬಾತನ ವಿರುದ್ದ ಕೇರಳದ ಕುಂಬಳೆ ಹಾಗೂ ಮಂಗಳೂರು ನಗರ, ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ಪ್ರಕರಣ ಈ ಹಿಂದೆ ದಾಖಲಾಗಿವೆ. ಬಂಧಿತರ ತೀವ್ರ ವಿಚಾರಣೆ ನಡೆಸಿದಾಗ 4 ಪ್ರಕರಣಗಳು ಪತ್ತೆಯಾಗಿವೆ.

ವಿಟ್ಲ ಪೊಲೀಸು ಠಾಣಾ ಅ.ಕ್ರ:163/2024 ಕಲಂ:331(3),331(4),305 BNS-2023, ಅ.ಕ್ರ:166/2024 ಕಲಂ:331(3),331(4),305 BNS-2023, ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ:95/2024 ಕಲಂ:331(3),331(4),305 BNS-2023, ಅ.ಕ್ರ:96/2024 ಕಲಂ:331(3),331(4),305 BNS-2023 ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳಿಂದ 1,35,000/–ರೂ ಮೌಲ್ಯದ ಗ್ಯಾಸ್‌ ಸಿಲಿಂಡರ್‌, ಮನೆ ಸಾಮಗ್ರಿಗಳು , ಹಾಗೂ ಕಳ್ಳತನಕ್ಕೆ ಉಪಯೋಗಿಸಿದ KA-19-AD-0585 ನೊಂದಣಿ ನಂಬ್ರದ ಅಟೊ ರಿಕ್ಷಾ -01 ಇದರ ಅಂದಾಜು ಮೌಲ್ಯ 1,50,000/- ರೂ ಆಗಿದ್ದು ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ ಸ್ವಾದೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 2,85,000/- ರೂ ಅಂದಾಜಿಸಲಾಗಿದೆ.

ಆರೋಪಿಗಳ ಪತ್ತೆ ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಯತೀಶ್‌ ಎನ್‌ ಐ.ಪಿ.ಎಸ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ರಾಜೇಂದ್ರ ಡಿ ಎಸ್‌ ರವರ ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್.‌ ವಿಜಯ ಪ್ರಸಾದ್‌ ರವರ ನಿರ್ದೇಶನದಂತೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರಾದ ಶ್ರೀ ನಾಗರಾಜ್‌ ಹೆಚ್‌ ರವರ ನೇತ್ರತ್ವದಲ್ಲಿ ಪೊಲೀಸ್‌ ಉಪ ನಿರೀಕ್ಷಕರಾದ ವಿದ್ಯಾ ಕೆ.ಜೆ. ರತ್ನಕುಮಾರ್‌, ಕೌಶಿಕ್‌ ಸಿಬ್ಬಂಧಿಗಳಾದ ಉದಯ ರೈ, ರಾಧಾಕೃಷ್ಣ, ರಕ್ಷೀತ್‌ ರೈ, ಶ್ರೀಧರ ಸಿ ಎಸ್‌, ಕೃಷ್ಣ ನಾಯ್ಕ್‌, ಗದಿಗೆಪ್ಪ ಕಲ್ಲೂರ, ಶಂಕರ ಶಂಶಿ, ಮನೋಜ್‌, ಸತೀಶ್‌, ಗಣಕಯಂತ್ರ ವಿಭಾಗದ ಸಂಪತ್‌, ದಿವಾಕರ್‌, ಭಾಗವಹಿಸಿರುತ್ತಾರೆ.

 

 

 

 

 

 

Leave a Reply

Your email address will not be published. Required fields are marked *