ಕಾರ್ಕಳ: ಸೇವಾ ಭಾರತ್ ಮಿಯ್ಯಾರು ಇವರ ನೇತೃತ್ವದಲ್ಲಿ ಅನ್ಕಾಡಿ ಫ್ರೆಂಡ್ಸ್ ಬೋರ್ಕಟ್ಟೆ, ಗಣೇಶೋತ್ಸವ ಸಮಿತಿ ಕುಂಟಿ ಬೈಲು, ನೆಲ್ಲಿಗುಡ್ಡೆ ಫ್ರೆಂಡ್ಸ್ ಮಿಯ್ಯಾರು, ಜವನೆರ ಕೂಟ ಮನ್ನಡ್ಕ ಬೋರ್ಕಟ್ಟೆ, ಸೂರಾಲು ಗ್ರಾಮ ಸೇವಾ ಟ್ರಸ್ಟ್ ಕಾರ್ಕಳ, ಹಳೆ ವಿದ್ಯಾರ್ಥಿ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಗುಪ್ಪೆ ಜೋಡುಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗ ಅಜ್ಜರಕಾಡು ಉಡುಪಿ ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಶಿಬಿರವು ನಾಳೆ (ಸೆಪ್ಟೆಂಬರ್ 14) ಬೆಳಿಗ್ಗೆ 8:30 ರಿಂದ 12:30 ರವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಗುಪ್ಪೆ ಜೋಡುಕಟ್ಟೆ ಇಲ್ಲಿ ನಡೆಯಲಿದೆ.
ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ತಾರಾನಾಥ್ ಕೋಟ್ಯಾನ್ ಸೂರಾಲು ವಿನಂತಿಸಿಕೊಂಡಿದ್ದಾರೆ.