Share this news

ಕೊಪ್ಪಳ: ವಿಜಯಪುರ, ಯಾದಗಿರಿ, ಧಾರವಾಡ ಜಿಲ್ಲೆಗಳಲ್ಲಿ ವಕ್ಫ್‌ ಆಸ್ತಿ ವಿವಾದ  ಭಾರೀ ಗದ್ದಲ ಹುಟ್ಟುಹಾಕಿದೆ. ಈ ವಿವಾದದಿಂದ ರೈತರು ಭೂಮಿ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಇದೀಗ ಕಲಬುರಗಿ, ಗದಗ, ದಾವಣಗೆರೆ, ಬೀದರ್‌ ಹಾಗೂ ಕೊಪ್ಪಳ ಜಿಲ್ಲೆಯ ರೈತರ ಭೂಮಿಯ  ಪಹಣಿಯಲ್ಲಿ ‘ವಕ್ಫ್‌ ಆಸ್ತಿ’  ಎಂದು ನಮೂದಾಗಿರುವುದ್ದು, ಇನ್ನೂ ಯಾವೆಲ್ಲ ಜಿಲ್ಲೆಗಳಲ್ಲಿ ಈ ವಕ್ಫ್‌ ಆಸ್ತಿ ಇದೆ ಎನ್ನುವ ಚಿಂತೆ ರಾಜ್ಯದ ರೈತರಲ್ಲಿ ದುಗುಡ ಹುಟ್ಟುಹಾಕಿದೆ. 

ಕೊಪ್ಪಳ ಜಿಲ್ಲೆಯ  ಕುಕನೂರು ಪಟ್ಟಣದಲ್ಲಿರುವ ಪಟ್ಟಣ ಪಂಚಾಯತ್ ಕಚೇರಿಯ 13 ಗುಂಟೆ ಜಾಗ ವಕ್ಫ್​​ಗೆ ಸೇರಿದೆ ಎಂದುಪಹಣಿಯಲ್ಲಿ ನಮೂದಾಗಿದೆ.ಕೊಪ್ಪಳ ವಿಭಾಗಾಧಿಕಾರಿ ಆದೇಶ ಅನ್ವಯ ಕುಕನೂರ ಉಪ ತಹಶಿಲ್ದಾರ್ 2019ರಲ್ಲಿ​ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹೆಸರಿನಲ್ಲಿರುವ ಸರ್ವೇ ನಂಬರ್ 54ರ 13 ಗುಂಟೆ ಜಾಗದ ಪಹಣಿಯಲ್ಲಿ ವಕ್ಫ್​ ಬೋರ್ಡ್​​ ನಮೂದಿಸಿದ್ದಾರೆ.​

ಕೊಪ್ಪಳ ತಾಲೂಕಿನ ಕವಲೂರು, ಹೂವಿನಾಳ ಕುಕನೂರು, ಯಲಬುರ್ಗಾ ತಾಲೂಕಿನ ಹಲವು ರೈತರ ಪಹಣಿಯ ಕಾಲಂ 11ರಲ್ಲಿ ವಕ್ಫ್ ಬೋರ್ಡ್​ ಎಂದು ಹೆಸರು ನಮೂದಾಗಿದೆ. ಅನೇಕ ರೈತರಿಗೆ ನೋಟಿಸ್ ನೀಡದೆ 2021ರಲ್ಲಿ ಪಹಣಿಯಲ್ಲಿ ವಕ್ಫ್​​ ಬೋರ್ಡ್​ಎಂದು ನಮೂದಾಗಿದೆ. ವಕ್ಫ್​ ಬೋರ್ಡ್​ 2023ರಲ್ಲಿ ಅನೇಕ ರೈತರಿಗೆ ನೋಟಿಸ್ ನೀಡಿದೆ. ತಮ್ಮ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ಹೇಳಿದೆ. ​​

ವಕ್ಫ್​ ವಿವಾದ ಹೆಚ್ಚಾಗುತ್ತಿದ್ದಂತೆ ರೈತರು ತಮ್ಮ ಪಹಣಿ ಪರಿಶೀಲಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ಪಹಣಿಯಲ್ಲಿ ವಕ್ಫ್​​ ಆಸ್ತಿ ಎಂದು ಉಲ್ಲೇಖಿಸಿದ್ದನ್ನು ಕಂಡು ರೈತರು ಕಂಗಾಲಾಗಿದ್ದಾರೆ.

 

 

 

 

 

 

 

Leave a Reply

Your email address will not be published. Required fields are marked *