ಹೆಬ್ರಿ: ವರಂಗ ಗ್ರಾಮದ ಕೆಲಕಿಲ ಸೇತುವೆ ಬಳಿ ಸೋಮವಾರ ಸಂಜೆ ಆಲ್ಟೋ ಕಾರು ಹಾಗೂ ಪಲ್ಸರ್ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಮರ್ಣೆ ಗ್ರಾಮದ ಎಣ್ಣೆಹೊಳೆ ರಾಧಾ ನಾಯಕ್ ಹೈಸ್ಕೂಲ್ ಬಳಿಯ ನಿವಾಸಿ ವಿಶ್ವನಾಥ(32) ಎಂಬವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಕಾರು ಚಾಲಕ ಬಿನು ಎಂಬಾತ ಕಾರನ್ನು ಕಾರ್ಕಳ ಕಡೆಯಿಂದ NRಪುರದ ಕಡೆಗೆ ಅತ್ಯಂತ ವೇಗವಾಗಿ ಚಲಾಯಿಸಿಕೊಂಡು ವರಂಗದ ಕೆಲಕಿಲ ಎಂಬಲ್ಲಿ ಹೆಬ್ರಿಯಿಂದ ಎಣ್ಣೆಹೊಳೆಗೆ ಬರುತ್ತಿದ್ದ ಪಲ್ಸರ್ ಬೈಕಿಗೆ ಡಿಕ್ಕಿಯಾಗಿದೆ.
ಈ ದುರ್ಘಟನೆಯಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತ್ರೇಸಿಯಮ್ಮ ಹಾಗೂ ಬೈಕ್ ಹಿಂಬದಿ ಸವಾರ ರವಿ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ












