ಕಾರ್ಕಳ: ಭಾರತವು ಅಭಿವೃದ್ಧಿ ಪಥದತ್ತ ದಾಪುಗಾಲು ಇಡುತ್ತಿರುವುದರಿಂದ ಸ್ವ ಉದ್ಯೋಗ ಕ್ಷೇತ್ರವು ಅಪರಿಮಿತ ಅವಕಾಶವನ್ನು ಹೊಂದಿದೆ. ಇಂದು ಭಾರತದಲ್ಲಿ ಸಿಎ ಹಾಗೂ ಸಿಎಸ್ ಕೋರ್ಸುಗಳಿಗೆ ವಿಪುಲ ಅವಕಾಶವಿದೆ. ಭಾರತದ ಆರ್ಥಿಕ ಚೈತನ್ಯ ಬಲಿಷ್ಟಗೊಳ್ಳಬೇಕಾದರೆ ಇಂತವುಗಳಲ್ಲಿ ಇಂದಿನ ಯುವಕರು ಗಮನ ಹರಿಸಬೇಕು ಎಂಬುದಾಗಿ ಸಿಎಸ್ ಸಂತೋಷ್ ಪ್ರಭು ಅವರು ಹೇಳಿದರು. ಅವರು ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಎಚ್ ಆರ್ ಡಿ ಘಟಕದಿಂದ ಆಯೋಜಿಸಲಾದ ವೃತ್ತಿಪರ ಕೋರ್ಸುಗಳ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರಿನ ಐಸಿಎಸ್‌ಐ ವಿಭಾಗದ ಸೀನಿಯರ್ ಕಾರ್ಯನಿರ್ವಾಹಕ ಸಹಾಯಕರಾದ ಶಂಕರ್ ಬಿ ಹಾಗೂ ಕಾಲೇಜಿನ ಎಚ್ ಆರ್ ಡಿ ಘಟಕದ ಸಂಯೋಜಕರಾದ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಟಿ ಶರಣ್ಯಾ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.