ಮಣಿಪಾಲ: ಶ್ರಮಯೇವ ಜಯತೆ ಎನ್ನುವ ಧ್ಯೇಯದೊಂದಿಗೆ ದೇಶದಲ್ಲಿ ಅತೀ ಹೆಚ್ಚು ಸದಸ್ಯರ ಸಂಘಟನೆ ಎನ್. ಎಸ್. ಎಸ್. ಅಂತಹ ಸುಭದ್ರ ತಳಹದಿಯ ಸಂಘಟನೆ ಸದಸ್ಯರಾಗಿರುವುದೇ ಹೆಮ್ಮೆಯ ವಿಷಯ.ಯುವಜನತೆಗೆ ವಿಧ್ಯಾಭ್ಯಾಸದ ಜೊತೆಗೆ ಸಾಮಾಜಿಕ ಜವಾಬ್ದಾರಿ ಸೇವಾ ಮಾನೋಭಾವನೆ ರೂಢಿಸಲು ಸೃಷ್ಟಿಯಾದ ಎನ್.ಎಸ್.ಎಸ್. ಕ್ರಾಂತಿಕಾರಿ ಸಾಧನಾ ಪಥದಲ್ಲಿ ಸಾಗುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುತ್ತಿದೆ ಎಂದು ಕರ್ನಾಟಕ ಸರಕಾರ(ಎನ್.ಎಸ್.ಎಸ್ ಕೋಶ)ದ ನಿಕಟಪೂರ್ವ ರಾಜ್ಯ ಎನ್.ಎಸ್.ಎಸ್ ಅಧಿಕಾರಿವಡಾ. ಗಣನಾಥ ಎಕ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಹೊಸ ಘಟಕ ಉದ್ಘಾಟಿಸಿ ಮಾತನಾಡಿದರು.ಎ ನ್.ಎಸ್.ಎಸ್. ಇತಿಹಾಸ ಹಾಗೂ ಪ್ರಸಕ್ತ ಸಾಧನೆಗಳ ವಿವರಣೆ ನೀಡಿ ಮಣಿಪಾಲ ಜ್ಞಾನಸುಧಾ ಹೊಸ ಎನ್.ಎಸ್.ಎಸ್. ಘಟಕಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗÀ)ಮಂಗಳೂರು ವಿಭಾಗದ ಎನ್.ಎಸ್.ಎಸ್. ವಿಭಾಗಾಧಿಕಾರಿ ಶ್ರೀಮತಿ ಸವಿತಾ ಎರ್ಮಾಳ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.ಇನ್ನೋರ್ವ ಮುಖ್ಯಅತಿಥಿಯಾಗಿ ಭಾಗವಹಿಸಿದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಪೂರ್ವ ವಿದ್ಯಾರ್ಥಿನಿ ಎನ್.ಎಸ್.ಎಸ್. ರಾಜ್ಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ ಸಮಿಯ ಹೆಗ್ಡೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಹೊಸ ಎನ್.ಎಸ್. ಎಸ್. ಘಟಕಕ್ಕೆ ಶುಭ ಹಾರೈಸಿ, ವಿದ್ಯಾರ್ಥಿಗಳು ಸಮಾಜದ ಕೊಡುಗೆಗಳಾಗಿ ಮೂಡಿ ಬರಬೇಕುಎಂದರು.
ಎನ್.ಎಸ್.ಎಸ್. ದಿನಾಚರಣೆಯ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಅಜೆಕಾರು ಪದ್ಮಾಗೋಪಾಲ್ ಎಜುಕೇಶನ್ ಟ್ರಸ್ಟ್(ರಿ)ನ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಬಂಡಿ, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಗಣೇಶ ಶೆಟ್ಟಿ, ಎನ್.ಎಸ್.ಎಸ್. ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಪ್ರೀತ್ ಹಾಗೂ ಸಿಂಚನ ವೇದಿಕೆಯಲ್ಲಿದ್ದರು.
ಉಪಪ್ರಾಂಶುಪಾಲರಾದ ಹೇಮಂತ್, ಉಪನ್ಯಾಸಕ ಬಳಗ ಉಪಸ್ಥಿತರಿದ್ದರು.ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಹಾಗೂ ಕಾಲೇಜಿನ ಉಪ ಪ್ರಾಂಶುಪಾಲರಾದ ರವಿ ಜಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು.ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ನಿರೂಪಿಸಿ ವಂದಿಸಿದರು.
ಕಾರ್ಕಳ : ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಮತ್ತು ರೋಟರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಹಾಗೂ ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವುಗಳ ಜಂಟಿ ಆಶ್ರಯದಲ್ಲಿ ಜರುಗಿದ ವಾಕಥಾನ್ ಹೃದಯ ದಿನಾಚರಣೆಯ ಅವಾರ್ಡ್ ಸ್ಪರ್ಧೆಯಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಗರಿಷ್ಠ ವಿದ್ಯಾರ್ಥಿಗಳ ಭಾಗವಹಿಸುವಿಕೆಯಲ್ಲಿ ಪ್ರಥಮ ಸ್ಥಾನ, ಅತ್ಯಂತ ಶಿಸ್ತಿನ ತಂಡಕ್ಕೆ ಪ್ರಥಮ ಸ್ಥಾನ, ಘೋಷಣೆ ಕೂಗುವಿಕೆಯಲ್ಲಿ ಪ್ರಥಮ, ಸ್ಕಿಟ್ ಸ್ಪರ್ಧೆಯಲ್ಲಿ ದ್ವಿತೀಯ, ಫ್ಲಕಾರ್ಡ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಬೋಧಕ-ಬೋಧಕೇತರ ವರ್ಗದವರು ಪ್ರಶಂಸಿಸಿದ್ದಾರೆ.