ಕಾರ್ಕಳ: ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಹಾಗೂ ರೋಟ್ರಾಕ್ಟ್ ಕ್ಲಬ್, ಭುವನೇಂದ್ರ ಕಾಲೇಜು ಹಾಗೂ ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತೆಯ ಸಹಯೋಗದಲ್ಲಿ ಸೆ.29ರಂದು ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಹೃದಯಕ್ಕಾಗಿ ನಡಿಗೆ ಕಾರ್ಯಕ್ರಮ ನಡೆಯಲಿದ್ದು, ಈ ವಾಕಥಾನ್ ನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಸೇರಿ 400ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ರೋಟರಿ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ್ ಆದಿರಾಜ್ ತಿಳಿಸಿದರು.
ಅವರು ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಗುರುವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಸೆ 29ರಂದು ಬೆಳಗ್ಗೆ 7.30ಕ್ಕೆ ಕಾರ್ಕಳ ಅನಂತಶಯನ ವೃತ್ತದಿಂದ ಹೃದಯಕ್ಕಾಗಿ ನಡಿಗೆ ಆರಂಭವಾಗಲಿದ್ದು, ಕಾರ್ಕಳ ಪೇಟೆಯ ಮೂಲಕ ಹಾದುಹೋಗಿ ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಸಂಪನ್ನಗೊಳ್ಳಲಿದೆ. ಕಾರ್ಕಳದ ಲೆಕ್ಕ ಪರಿಶೋಧಕ ಕೆ.ಕಮಲಾಕ್ಷ ಕಾಮತ್ ವಾಕಥಾನ್ ಗೆ ಚಾಲನೆ ನೀಡಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಇರುವುದೊಂದೇ ಹೃದಯ ಅದನ್ನು ರಕ್ಷಿಸಿ ಎಂಬ ಕಿರು ಪ್ರಹಸನ ಸ್ಪರ್ಧೆ ಆಯೋಜಿಸಲಾಗಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಹೃದಯದ ಆರೋಗ್ಯದ ಕುರಿತಂತೆ ದಿಕ್ಸೂಚಿ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಮಂಗಳೂರು ಕೆಎಂಸಿ ಹೃದ್ರೋಗ ತಜ್ಞ ಡಾ.ದಿತೇಶ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು
ಸುದ್ಧಿಗೋಷ್ಟಿಯಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಉಪೇಂದ್ರ ವಾಗ್ಳೆ, ಕಾರ್ಯದರ್ಶಿ ಪ್ರಶಾಂತ್ ಜೈನ್, ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಯ ನಟೇಶ್ ಉಪಸ್ಥಿತರಿದ್ದರು.
ಅ.2 ರಂದು ಉಚಿತ ಹೃದಯ ತಪಾಸಣಾ ಶಿಬಿರ
ಗಾಂಧಿಜಯAತಿ ದಿನವಾದ ಅ.2 ರಂದು ಬೆಳಗ್ಗೆ 10 ರಿಂದ 12.30ರ ವರೆಗೆ ರೋಟರಿ ಕ್ಲಬ್ ಕಾರ್ಕಳ ಹಾಗೂ ಟಿಎಂ ಪೈ ಆಸ್ಪತೆ ವತಿಯಿಂದ ಶಿಬಿರÀ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ. ಭರತೇಶ್ ಆದಿರಾಜ್ ತಿಳಿಸಿದರು.
in