Share this news

ಪಡುಬಿದ್ರಿ: ಸಾಲ ಮರುಪಾವತಿ ಮಾಡಲಿಲ್ಲ ಎಂದು ಆರೋಪಿಸಿ ಮೂವರು ಯಕ್ಷಗಾನ ಕಲಾವಿದರೊಬ್ಬರಿಗೆ ದೈಹಿಕ ಹಲ್ಲೆ ನಡೆಸಿದ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ ನಿವಾಸಿ, ಸಸಿಹಿತ್ಲು ಮೇಳದ ನಿತಿನ್ ಕುಮಾರ್ ಹಲ್ಲೆಗೊಳಗಾದವರು. ಸಚಿನ್ ಅಮೀನ್ ಉದ್ಯಾವರ, ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಶಿಯರ್ ಹಲ್ಲೆ ನಡೆಸಿದ್ದಾರೆ.

ಆರೋಪಿ ಸಚಿನ್ ಹಾಗೂ ಹಲ್ಲೆಗೊಳಗಾದ ನಿತಿನ್ ಇಬ್ಬರೂ ಯಕ್ಷಗಾನ ಕಲಾವಿದರಾಗಿದ್ದು, ಗೆಳೆಯರಾಗಿದ್ದರು. ಆದರೆ ಪಡೆದ ಸಾಲ ಹಿಂದಿರುಗಿಸಿಲ್ಲ ಎನ್ನುವ ಕಾರಣಕ್ಕೆ ನಿತಿನ್‌ನನ್ನು ಪಾವಂಜೆ ಮೇಳದ ಯಕ್ಷ ಕಲಾವಿದನಾಗಿದ್ದ ಆರೋಪಿ ಸಚಿನ್, ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಶಿಯರ್ ಸೇರಿ ಉದ್ಯಾವರದ ಮನೆಯೊಂದರಲ್ಲಿ ಜ. 21ರಂದು ಕಂಬಳದ ಕೋಣಗಳ ಬಾರುಕೋಲಿನ ಮೂಲಕ ಸತತವಾಗಿ ಹಲ್ಲೆಗೈದಿದ್ದರು.

ಬೆತ್ತದಿಂದ ನಿತಿನ್ ಅವರ ಬೆನ್ನಿಗೆ, ತಲೆಗೆ, ಕಾಲಿಗೆ ಹೊಡೆದಿದ್ದಾರೆ. ಕಾಲಿನಿಂದ ತುಳಿದು ಕೈಯಿಂದ ಕೆನ್ನೆಗೆ ಹೊಡೆದು ಖಾಲಿ ಬಾಂಡ್ ಪೇಪರ್‌ಗೆ ಬಲಾತ್ಕಾರವಾಗಿ ಸಹಿ ಪಡೆದುಂಡಿದ್ದಾರೆ. ಸಂಜೆ ವಾಪಸು ಪಡುಬಿದ್ರಿಗೆ ಆರೋಪಿಗಳೇ ಕಳುಹಿಸಿಕೊಟ್ಟಿದ್ದಾರೆ. ಜ. 21ರ ರಾತ್ರಿ ವೇಳೆ ಪುತ್ತೂರಿನಲ್ಲಿ ನಡೆದ ಯಕ್ಷಗಾನಕ್ಕೆ ಹೋಗಿ ಅಲ್ಲಿ ಕೆಲಸ ಮಾಡಿದ್ದ ನಿತಿನ್, ಜ. 22ರಂದು ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *