Share this news

ಕಾರ್ಕಳ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ನಃಶಾಂತಿಗಾಗಿ ಯೋಗ ಶೀರ್ಷಿಕೆಯಡಿ ಯೋಗ ಕಾರ್ಯಕ್ರಮವು ಜೂ 21 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ 2 ಗಿನ್ನಿಸ್ ದಾಖಲೆ ಸೃಷ್ಟಿಸಿ, 9 ವಿಶ್ವದಾಖಲೆ ನಿರ್ಮಿಸಿದ ಅದ್ಭುತ ಪ್ರತಿಭೆ ಉಡುಪಿಯ ಸೇಂಟ್ ಸಿಸಿಲಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕು.ತನುಶ್ರೀ ಅವರು ‘ತನು ಯೋಗ ಭೂಮಿ’ ಮುಖಾಂತರ ಯೋಗ ಪ್ರದರ್ಶನ ನೀಡಿದರು. ‌
ಕಾಲೇಜಿನ ಪ್ರಚಾರ್ಯ ವಿದ್ವಾನ್ ಗಣಪತಿ ಭಟ್ ಮಾತನಾಡಿ,ಯೋಗ ಎನ್ನುವುದು ಕೇವಲ ವ್ಯಾಯಾಮವಲ್ಲ ಅದು ಜೀವನ ಶೈಲಿ, ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕರ ಹಾಗೂ ಸಂತೃಪ್ತ ಜೀವನ ನಡೆಸಬಹುದು ಎಂದರು.
ಕಾರ್ಯಕ್ರಮದ ಕೊನೆಗೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ತನುಶ್ರೀಯವರನ್ನು ಗೌರವಿಸಿ
ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗ ,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

 

 

 

 

 

 

Leave a Reply

Your email address will not be published. Required fields are marked *