ಮಂಗಳೂರು:ಸಿದ್ದರಾಮಯ್ಯನವರೇ ದಕ್ಷಿಣ ಕನ್ನಡಕ್ಕೆ ಮೋದಿ ಏನು ಕೊಟ್ಟಿದ್ದಾರೆ ? ಎಂಬ ಪ್ರಶ್ನೆಗೆ ಉತ್ತ ಕೊಡುವುದಕ್ಕೆ ಬಿಜೆಪಿ ಸಿದ್ಧವಿದೆ.
ಆದರೆ ಕರಾವಳಿ ಜಿಲ್ಲೆಗೆ ಮೋದಿಯವರು ಕೊಟ್ಟಿರುವ ಅನುದಾನದಲ್ಲಿ ನೀವು ಕಿತ್ತುಕೊಂಡು ದೊಡ್ಡ ಪಟ್ಟಿಯೇ ನಮ್ಮಲ್ಲಿದೆ, ಮೋದಿಯವರ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡಿರುವುದೇ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಪಶ್ಚಿಮ ವಾಹಿನಿ ಯೋಜನೆಗೆ ಬಿಜೆಪಿ ಸರ್ಕಾರ ಕೊಟ್ಟ ೫೦೦ ಕೋಟಿ ರೂ. ಕಿತ್ತುಕೊಂಡಿರಿ.
ಜಲಜೀವನ್ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರ ಕೊಡುತ್ತಿದ್ದ ಅನುದಾನದ ಮ್ಯಾಚಿಂಗ್ ಗ್ರ್ಯಾಂಟ್ ಕಿತ್ತುಕೊಂಡಿರಿ.
ಬ್ರಹ್ಮರ್ಷಿ ನಾರಾಯಣ ಗುರು ಅಭಿವೃದ್ಧಿ ಮಂಡಳಿಗೆ ಬಿಜೆಪಿ ಸರ್ಕಾರ ಕೊಟ್ಟ ಭರವಸೆಯ ಹಣ ಕಿತ್ತುಕೊಂಡಿರಿ.
ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತೇವೆಂಬ ಮಾತು ಕೊಟ್ಟು ಕಿತ್ತುಕೊಂಡಿರಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ರಸ್ತೆ ಅಭಿವೃದ್ಧಿ ಮಾಡದೇ ಡಾಂಬರೀಕರಣವನ್ನು ಕಿತ್ತುಕೊಂಡಿರಿ
ಕರಾವಳಿಯ ದೇಗುಲ ಹಾಗೂ ಭಜನಾ ಮಂದಿರಗಳಿಗೆ ನಮ್ಮ ಸರ್ಕಾರ ಕೊಡುತ್ತಿದ್ದ ಅನುದಾನ ಕಿತ್ತುಕೊಂಡಿರಿ.
ಬಂದರು ಅಭಿವೃದ್ಧಿಯ ಕನಸು ಕಿತ್ತುಕೊಂಡಿರಿ.
ನಾವು ನಿಗ್ರಹಿಸಿ ಮಟ್ಟ ಹಾಕಿದ್ದ ನಕ್ಸಲರ ನೆಂಟರಿಗೆ ನಿಮ್ಮ ಕಚೇರಿಯ ಸುತ್ತಮುತ್ತ ಆಶ್ರಯಕೊಟ್ಟು ದಕ್ಷಿಣ ಕನ್ನಡದ ಶಾಂತಿ – ಸುವ್ಯವಸ್ಥೆ ಕಿತ್ತುಕೊಂಡಿದ್ದೀರಿ ಎಂದು ಆರೋಪಿಸಿದ್ದಾರೆ.
ನಿಮ್ಮ ಕೊಡುಗೆ ಕುಕ್ಕರ್ ಬಾಂಬ್ ಬ್ರದರ್ಸ್ ಗಳಿಗೆ ಮಾತ್ರ ಎಂದು ಸುನಿಲ್ ತಿರುಗೇಟು ನೀಡಿದ್ದಾರೆ
ಹೇಳುತ್ತಾ ಹೋದರೆ ನೂರಾರು ಉದಾಹರಣೆಗಳನ್ನು ದಾಖಲೆ ಸಹಿತ ದೃಷ್ಟಾಂತ ಕೊಡಬಲ್ಲೆ. ಕಾಗಕ್ಕ, ಗುಬ್ಬಕ್ಕನ ಕತೆ ಹೇಳಿ ಎಷ್ಟು ದಿನ ಜನರ ದಾರಿ ತಪ್ಪಿಸುತ್ತೀರಿ ? ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ಸಮಗ್ರ ಕರಾವಳಿ ಜಿಲ್ಲೆಗಳು ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಕಂಡಿದ್ದು ಬಿಜೆಪಿ ಕಾಲದಲ್ಲಿ ಎಂದು ಎದೆ ತಟ್ಟಿ ಹೇಳುತ್ತೇನೆ. ಈ ಬಗ್ಗೆ ಬೇಕಾದರೆ ಬಹಿರಂಗ ಚರ್ಚೆಗೆ ಸಿದ್ದ ಎಂದು ಸುನಿಲ್ ಕುಮಾರ್ ಸಿಎಂಗೆ ಸವಾಲೆಸೆದಿದ್ದಾರೆ.