ಕಾರ್ಕಳ : ಮಹಾಲಿಂಗೇಶ್ವರ ಯುವಕ ಮಂಡಲ ಹಾಗೂ ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ ಪತ್ತೊಂಜಿಕಟ್ಟೆ ಪೆರ್ವಾಜೆ ಕಾರ್ಕಳ ಇದರ 44ನೇ ವಾರ್ಷಿಕೋತ್ಸವ ದೇವಸ್ಥಾನದ ಆವರಣದಲ್ಲಿನಡೆಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕೊರಳಕೋಡಿ ಅಧ್ಯಕ್ಷತೆ ವಹಿಸಿದ್ದರು, ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಆರ್ಚಕ ಹರಿಕೃಷ್ಣ ಭಟ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಕಳದ ಚಾರ್ಟಡ್ ಅಕೌಂಟೆಂಟ್ ಕಮಲಾಕ್ಷಕಾಮತ್, ಕೆ.ಎಂ.ಇ.ಎಸ್. ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರು,ಪ್ರಥಮ ದರ್ಜೆ ಪಿ.ಡಬ್ಲ್ಯೂ.ಡಿ ಗುತ್ತಿಗೆದಾರ ಅಂಬಿಕಾ ಪ್ರಸಾದ್ ಶೆಟ್ಟಿ, ಅರುಣ್ ಕುಮಾರ್ ನಿಟ್ಟೆ ಮುಖ್ಯ ಅತಿಥಿಗಳಾಗಿದ್ದರು. ಮಹಿಳಾ ಮಂಡಲ ಉಪಾಧ್ಯಕ್ಷೆ ಹೇಮಾ ಸತೀಶ್ ಮತ್ತು ಮುಖ್ಯಶಿಕ್ಷಕಿ ಶಾಂತಿ ಡಿ ಅಲ್ಮೇಡಾ ಉಪಸ್ಥಿತರಿದ್ದರು. ಯುವಕ ಮಂಡಲದ ಕೋಶಧಿಕಾರಿ ಪ್ರಸನ್ನ ರಾವ್ ಸ್ವಾಗತಿಸಿದರು, ಸಂದೇಶ್ ಕೋಟ್ಯಾನ್, ಶಾಂತಿ ಡಿ. ಅಲ್ಮೇಡಾ ವರದಿ ವಾಚಿಸಿದರು. ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಪಡೆದ ಹರೀಣ್ ಇವರನ್ನು ಸಮ್ಮಾನಿಸಲಾಯಿತ್ತು.
ಶುಭ ಲಕ್ಷ್ಮೀ ಬಂಗೇರ ಸಮ್ಮಾನ ಪತ್ರ ವಾಚಿಸಿದರು, ಯುವಕ ಮಂಡಲದ ಕ್ರೀಡಾ ಕಾರ್ಯದರ್ಶಿ ಸುರೇಶ್ ಸುವರ್ಣ, ಮಹಿಳಾ ಮಂಡಲದ ಮಮತಾ ಸುವರ್ಣ ಬಹುಮಾನ ವಿಜೇತರಪಟ್ಟಿ ವಾಚಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ತೋರಿದ ಪ್ರತಿಭೆಗಳನ್ನು ಪುರಸ್ಕರಿಸಲಾಯಿತು. ಗುಂಡ್ಯ ಹಾಗೂ ಪತ್ತೊಂಜಿಕಟ್ಟೆಯ ಇಬ್ಬರಿಗೆ ವೈದ್ಯಕೀಯ ಚಿಕಿತ್ಸೆ ಬಗ್ಗೆ ಧನಸಹಾಯ ಮಾಡಲಾಯಿತು. ಹೆನ್ರಿ ಸಾಂತ್ ಮರ್ಯೋ, ದಿನೇಶ್ ಕೊರಳಕೋಡಿ, ಜ್ಯೋತಿ ಗಣೇಶ್ ಶೆಟ್ಟಿ, ಹೇಮ ಸತೀಶ್ ಅವರನ್ನು ಸಮ್ಮಾನಿಸಲಾಯಿತು. ಮಹಿಳಾ ಮಂಡಲದ ಕಾರ್ಯದರ್ಶಿ ಅರುಂಧತಿ ಬಿ, ಆಚಾರ್ ವಂದಿಸಿದರು. ನವೀನ್ ಎಂ. ಸುವರ್ಣ ಸಭಾ ಕಾರ್ಯಕ್ರಮ ನಿರೂಪಿಸಿದರು, ವೀಣಾ ರಾಜೇಶ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಅನಂತರ ಕಲಾರಂಗ ಕಾರ್ಕಳ ಇದರ ಕಲಾವಿದರ ಅಭಿನಯದ “ಪುಂಡಿ ಪಣವು” ನಾಟಕ ಪ್ರದರ್ಶನಗೊಂಡಿತು, ಯುವಕ, ಮಹಿಳಾ ಮಂಡಲದ ಎಲ್ಲ ಪದಾಧಿಕಾರಿಗಳು, ಗೌರವ ಸಲಹೆಗಾರರು, ಸದಸ್ಯರು ಉಪಸ್ಥಿತರಿದ್ದರು.