ಉಡುಪಿ : ಉಡುಪಿ ನಗರದಲ್ಲಿನ ಪ್ರತಿಷ್ಠಿತ ಖಾಸಗಿ ನೇತ್ರ ಚಿಕಿತ್ಸಾಲಯದ ನಸಿಂಗ್ ಕಾಲೇಜಿನಲ್ಲಿ ಮಹಿಳಾ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಇರಿಸಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಮಾಡಿರುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಅದನ್ನು ಉಚ್ಚಿಲ ಯುವಕನ ಮೊಬೈಲ್ ಗೆ ರವಾನಿಸಿದ್ದಾರೆ ಎನ್ನುವ ಸಂದೇಶ ಇದೀಗ ಫೇಸ್ ಬುಕ್,ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು ಹಿಂದು ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋದಾಗ ಮುಸ್ಲಿಂ ವಿದ್ಯಾರ್ಥಿನಿಯರು ಶೂಟಿಂಗ್ ಮಾಡುತ್ತಿದ್ದರು. ನಂತರ ಅದನ್ನು ಉಚ್ಚಿಲದ ಯುವಕನೊಬ್ಬನಿಗೆ ಕಳುಹಿಸುತ್ತಿದ್ದರು. ಆತ ಅದನ್ನು ವಾಟ್ಸಪ್ ಗ್ರೂಪ್ ಮತ್ತಿತರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುತ್ತಿದ್ದಾನೆ, ಆದ್ದರಿಂದ ಹಿಂದೂ ಯುವತಿಯರೇ ಎಚ್ಚರ ಎನ್ನುವ ರೀತಿಯಲ್ಲಿ ಸಂದೇಶಗಳು ಮೊಬೈಲ್ ಗಳಲ್ಲಿ ವೈರಲ್ ಆಗುತ್ತಿವೆ.ಇದೇ ವಿಚಾರಕ್ಕೆ ಸಂಬAಧಪಟ್ಟAತೆ ಹಿಂದೂ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತದ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದ್ದು ಎರಡು ಕೋಮಿನ ವಿದ್ಯಾರ್ಥಿನಿಯರ ನಡುವೆ ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಈ ವಿವಾದ ಬೆಳೆಯುತ್ತಿದ್ದಂತೆಯೇ ಎಚ್ಚೆತ್ತ ಆಡಳಿತ ಮಂಡಳಿ ಯಾವುದೇ ಪ್ರಕರಣ ದಾಖಲಿಸದೇ ವಿದ್ಯಾರ್ಥಿನಿಯರಿಂದ ಮುಚ್ಚಳಿಕೆ ಬರೆಸಿಕೊಂಡು ವೀಡಿಯೋ ಶೂಟ್ ಮಾಡಿದ ಮೂವರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದೆ ಎನ್ನುವ ಸಂದೇಶ ಹರಿದಾಡಿದ್ದು ಹಿಂದೂ ಯುವತಿಯರೇ ಎಚ್ಚರವಾಗಿರಬೇಕು ಎನ್ನುವ ಸಂದೇಶ ನೀಡಿದ್ದಾರೆ.
ಹಿಂದೂ ಸಂಘಟನೆಗಳ ಆಕ್ರೋಶ:
ಈ ಪ್ರಕರಣ ನಡೆದಿದೆ ಎನ್ನುವ ಮಾಹಿತಿ ಹರಿದಾಡಿದ ಬೆನ್ನಲ್ಲೇ ಈ ಕೃತ್ಯದ ವಿರುದ್ಧ ಹಿಂದೂ ಸಂಘಟನೆಗಳು ತೀವೃ ಆಕ್ರೋಶ ವ್ಯಕ್ತಪಡಿಸಿವೆ.ಹಿಂದು ಸಂಘಟನೆಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಲವ್ ಜಿಹಾದ್ ಮಾದರಿ ಕೃತ್ಯ ಇದಾಗಿದ್ದು ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿವೆ. ಇಂತಹ ಮತೀಯ ಶಕ್ತಿಗಳ ಪ್ರಚೋದನೆಯಿಂದ ವಿದ್ಯಾರ್ಥಿನಿಯರು ಹಿಜಾಬ್ ವಿವಾದ ಆರಂಭವಾಗಿತ್ತು, ಮುಸ್ಲಿಮ್ ಯುವತಿಯರನ್ನು ಬಳಸಿಕೊಂಡು ಹಿಂದು ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸುವ ಲೇಡಿ ಗ್ಯಾಂಗ್ ಕರಾವಳಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ