Share this news

ಮೂಲ್ಕಿ: ಶಿವಳ್ಳಿ ಸ್ಪಂದನ ಪಾವಂಜೆ ವಲಯದ ಮಹಾಸಭೆಯು ಭಾನುವಾರ ಹೊಯ್ಗೆಗುಡ್ಡೆ ಶ್ರೀ ಉಮಾ ಮಹೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಸತೀಶ್ ಭಟ್ ಆಗಸ್ಟ್ 13ರ ಭಾನುವಾರ ಪಾವಂಜೆ ವಲಯದ ಸಹಯೋಗದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಕ್ಯಾರಂ, ಚೆಸ್ ಕ್ರೀಡೆ ಗಳ ಅಂತಿಮ ಚರಣದ ಪಂದ್ಯಾಟ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭಗಳ ಮಾಹಿತಿ ನೀಡಿದರು.
ತಾಲೂಕು ವಲಯ ಕಾರ್ಯದರ್ಶಿ ಗಣೇಶ್ ಹೆಬ್ಬಾರ್ ಈ ಕಾರ್ಯಕ್ರಮಗಳ ರೂಪುರೇಷೆ ವಿವರ ನೀಡಿ ಎಲ್ಲಾ ಸದಸ್ಯರ ತನು ಮನ ಧನದ ಸಹಕಾರ ಕೋರಿದರು
ಖಜಾಂಜಿ ವೆಂಕಟೇಶ್ ಭಟ್ ಲೆಕ್ಕಪತ್ರ ವಿವರ ನೀಡಿದರು.ಕಾರ್ಯದರ್ಶಿ ಪ್ರಸನ್ನಕುಮಾರ್ ಸಂಘದ ಈವರೆಗಿನ ಕಾರ್ಯಕ್ರಮಗಳ ವಿವರಣೆ ನೀಡಿದರು.
ಮಾಧ್ಯಮ ಪ್ರತಿನಿಧಿ ಮೋಹನ್ ರಾವ್ ಉಪಸ್ಥಿತರಿದ್ದರು
ಗಣೇಶ್ ತಂತ್ರಿ ವಂದಿಸಿ, ಶ್ರೀಮತಿ ಆಶಾ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.
ಹಲವು ಹೊಸ ಸದಸ್ಯರ ಸೇರ್ಪಡೆ ಹಾಗೂ ಸದಸ್ಯತ್ವ ನವೀಕರಣ ನಡೆಯಿತು.

Leave a Reply

Your email address will not be published. Required fields are marked *