ಕಾರ್ಕಳ: ಲಘು ವಾಹನ ಚಾಲನೆ ಹಾಗೂ ದ್ವಿಚಕ್ರ ವಾಹನ ಚಾಲನಾ ತರಬೇತಿ ನೀಡುವ ಸಂಸ್ಥೆಯಾಗಿರುವ ಅಂಬಾ ಮೋಟಾರ್ ಡ್ರೈವಿಂಗ್ ಸ್ಕೂಲ್ ಅಜೆಕಾರಿನಲ್ಲಿ ಶುಕ್ರವಾರ ಶುಭಾರಂಭಗೊಂಡಿದೆ.
ಅಜೆಕಾರು ಮುಖ್ಯರಸ್ತೆಯಲ್ಲಿನ ಶಾಲೋಮ್ ಪ್ರಗತಿ ಕಾಂಪ್ಲೆಕ್ಸ್ ನಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪಂಚಾಯತಿ ಸದಸ್ಯ ಉದ್ಯಮಿ ಗುರುಪ್ರಸಾದ್ ರಾವ್, ನಂದಕುಮಾರ್ ಹೆಗ್ಡೆ, ಸಂಸ್ಥೆ ಮಾಲಕರಾದ ಅಂಬಾ ಪ್ರಸಾದ್, ಶೋಭಾ, ಪ್ರತೀಕ್ ,ಪಿ ಮುಂತಾದವರು ಉಪಸ್ಥಿತರಿದ್ದರು.
ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿರುವ ಅಂಬಾ ಮೋಟಾರ್ ಡ್ರೈವಿಂಗ್ ಸ್ಕೂಲ್ ನಲ್ಲಿ ಲಘ ವಾಹನ ಚಾಲನೆ ಹಾಗೂ ಮಹಿಳೆಯರಿಗೆ ಮಹಿಳಾ ಸವಾರರ ಮೂಲಕ ದ್ವಿಚಕ್ರ ವಾಹನ ತರಬೇತಿಯನ್ನು ನೀಡಲಾಗುತ್ತದೆ.