ಕಾರ್ಕಳ; ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್ ಗೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಮೇ 10 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಅದ್ದೂರಿ ರಜತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
ಅವರು ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಳೆದ 2000 ನೇ ಇಸವಿಯ ಜನವರಿಯಲ್ಲಿ ಕಾರ್ಕಳದ ಸೂರಾಲಿನಲ್ಲಿ ಅರಂಭಗೊAಡ ನವೋದಯ ಗ್ರಾಮ ವಿಕಾಸ ಸ್ವಸಹಾಯ ಸಂಘವು 25 ವರ್ಷ ಪೂರೈಸಿದೆ. ಗ್ರಾಮೀಣ ಅಭಿವೃದ್ಧಿ ಹಾಗೂ ಮಹಿಳೆಯ ಸಬಲೀಕರಣದ ಉದ್ದೇಶದಿಂದ ಆರಂಭಗೊAಡ ನವೋದಯ ಸ್ವಸಹಾಯ ಗುಂಪುಗಳಲ್ಲಿ ಶೇ 90 ರಷ್ಟು ಮಹಿಳೆಯರೇ ಸದಸ್ಯರಾಗಿರುವುದು ಬಹಳ ಸಂತೋಷದಾಯಕ ವಿಚಾರವಾಗಿದೆ. ಮಹಿಳೆಯರು ಆರ್ಥಿಕವಾಗಿ ಮಾತ್ರ ಸ್ವಾವಲಂಬಿಗಳಾಗಿಲ್ಲ ಇದರ ಜತೆಗೆ ಸಮಾಜದ ಎಲ್ಲಾ ರಂಗಗಳಲ್ಲಿಯೂ ಮುಂಚೂಣಿಯಲ್ಲಿದ್ದು, ಇದರಲ್ಲಿ ನವೋದಯ ಟ್ರಸ್ಟ್ ಪಾತ್ರವೂ ಬಹುಮುಖ್ಯವಾಗಿದೆ, ಈ ಹಿನ್ನಲೆಯಲ್ಲಿ ರಜತ ಮಹೋತ್ಸವದಲ್ಲಿ ಮಹಿಳೆಯರ ಶಕ್ತಿ ಅನಾವರಣಗೊಳ್ಳಬೇಕೆನ್ನುವ ನಿಟ್ಟಿನಲ್ಲಿ ಈ ಬೃಹತ್ ಸಮಾರಂಭ ಆಯೋಜಿಸಲಾಗುತ್ತಿದೆ ಎಂದರು. ಇದಕ್ಕೂ ಮುನ್ನ ಮಾ 24 ರಂದು ನವೋದಯ ಸ್ವಸಹಾಯ ಸಂಘದ 5 ಲಕ್ಷ ಸದಸ್ಯರಿಗೆ ಉಚಿತ ಸಮವಸ್ತç ವಿತರಿಸಲಾಗುತ್ತಿದೆ ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ ಶೆಟ್ಟಿ ಮಾತನಾಡಿ, ಗ್ರಾಮೀಣ ಅಭಿವೃದ್ದಿ ಹಾಗೂ ಮಹಿಳೆಯರ ಸಬಲೀಕರಣದ ಕನಸನ್ನು ಹೊತ್ತು ಆರಂಭಗೊAಡ ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್ ಪ್ರಸ್ತುತ ರಾಜ್ಯದ 7 ಜಿಲ್ಲೆಗಳಿಗೆ ವಿಸ್ತರಣೆಯಾಗಿದ್ದು, ಸುಮಾರು 4 ಲಕ್ಷಕ್ಕೂ ಮಿಕ್ಕಿ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಈ ಮೂಲಕ ಸಹಕಾರಿ ರಂಘದ ಭೀಷ್ಮ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಕನಸು ಸಾಕಾರಗೊಂಡಿದೆ ಎಂದರು. ಮೇ 10 ರಂದು ಶನಿವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುªರೀ ಕಾರ್ಯಕ್ರಮದಲ್ಲಿ ಸುಮಾರು 1.50 ಲಕ್ಷ ಜನರು ಬಾಗವಹಿಸಲಿದ್ದು, ಸಂಘದ ಪ್ರಧಾನ ಕಚೇರಿಯಿಂದ ನೆಹರೂ ಮೈದಾನದವರೆಗೆ ಮೆರವಣಿಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಮೇಘರಾಜ್ ಜೈನ್, ಸುನಿಲ್ ಕುಮಾರ್ ಬಜಗೋಳಿ, ಪ್ರಧಾನ ವ್ಯವಸ್ಥಾಪಕಿ ಪೂರ್ಣಿಮಾ ಉಪಸ್ಥಿತರಿದ್ದರು.
K