Month: June 2026

ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ ಚುನಾವಣೆ ವಿಳಂಬ: ಹೈಕೋರ್ಟ್‌ ಕ್ಷಮೆ ಕೇಳಿದ ಸರ್ಕಾರ, 8 ವಾರಗಳ ಕಾಲಾವಕಾಶಕ್ಕೆ ಮನವಿ!

ಬೆಂಗಳೂರು,ಜೂ.06: ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಸದ್ಯಕ್ಕೆ ನಡೆಯುವುದು ಬಹುತೇಕ ಅನುಮಾನವಾಗಿದೆ. ಏಕೆಂದರೆ,ಸರ್ಕಾರ ಪಂಚಾಯಿತಿಗಳ ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಹೈಕೋರ್ಟ್‌ನಿಂದ ಮತ್ತೆ 8ವಾರಗಳ ಸಮಯಾವಕಾಶ ಪಡೆದಿದೆ. ರಾಜ್ಯದ ಎಲ್ಲಾ ಜಿಲ್ಲಾ…

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ನೋಟ್ ಪುಸ್ತಕ ವಿತರಣೆ

ಕಾರ್ಕಳ,ಜೂ.6: ರೋಟರಿ ಕ್ಲಬ್ ಕಾರ್ಕಳ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾರಾಡಿಯಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡಿ, ರೋಟರಿಯ ಧ್ಯೇಯ ವಾಕ್ಯ…

ಕೃಷಿ ಕಿಸಾನ್ ರಕ್ಷಣಾ ಸಂಘದಿಂದ ವಿಶ್ವ ಪರಿಸರ ದಿನಾಚರಣೆ

ಕಾರ್ಕಳ,ಜೂ.06: ಕೃಷಿ ಕಿಸಾನ್ ರಕ್ಷಣಾ ಸಂಘ (ರಿ.) ಉಡುಪಿ, ರೆಂಜಾಳ, ಕಾರ್ಕಳ ಇವರ ಆಶ್ರಯದಲ್ಲಿ ರೆಂಜಾಳ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಶುಕ್ರವಾರ ಜರುಗಿತು. ಸಾಮಾಜಿಕ ಕಾರ್ಯಕರ್ತೆ, ಪರಿಸರ ಹೋರಾಟಗಾರ್ತಿ ಆರತಿ…

ಪಾಕ್ ಉಗ್ರನ ಜತೆ ಸಂಪರ್ಕ: ತುಮಕೂರು, ದಾವಣಗೆರೆಯಲ್ಲಿ ಇಬ್ಬರು ಯುವಕರ ಬಂಧನ

ಬೆಂಗಳೂರು, ಜೂ.6: ರಾಜ್ಯದಲ್ಲಿ ವಿದೇಶಿ ಉಗ್ರರ ನೆಟ್‌ವರ್ಕ್ ಮತ್ತು ಸ್ಲೀಪರ್ ಸೆಲ್‌ಗಳು ಸಕ್ರಿಯವಾಗಿರುವ ಆತಂಕಕಾರಿ ವಿಚಾರ ಬಯಲಾಗಿದೆ. ಪಾಕಿಸ್ತಾನ ಮೂಲದ ಶಂಕಿತ ಉಗ್ರನೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊAಡು, ದೇಶದ ಭದ್ರತೆಗೆ ಧಕ್ಕೆ ತರಲು ಹಾಗೂ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಇಬ್ಬರು…

ಶಾಸಕರ ಪ್ರಯತ್ನದಿಂದ ಕಾರ್ಕಳ ಪುರಸಭಾ ವ್ಯಾಪ್ತಿಯ ಕಸದ ಸಮಸ್ಯೆ ಪರಿಹಾರ: ಪ್ರಚಾರದ ಗೀಳಿಗೆ ಕಾರ್ಕಳ ಕಾಂಗ್ರೆಸ್ಸಿಗರಿಂದ ಸುಳ್ಳು ಆರೋಪ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಕ್ರೋಶ

ಕಾರ್ಕಳ, ಜೂ.05:ಕಾರ್ಕಳ ಪುರಸಭಾ ವ್ಯಾಪ್ತಿಯ ಕಸದ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಈಗಾಗಲೇ ಎಸಿ, ಜಿಲ್ಲಾ ಯೋಜನಾಧಿಕಾರಿ ಹಾಗೂ ಇತರ ಅಧಿಕಾರಿಗಳ ಸಭೆ ಕರೆದು ಕಾರ್ಕಳದ ಅಭಿವೃದ್ಧಿಯ ಕುರಿತು ಸಭೆ ನಡೆಸಿದ್ದಾರೆ.…

ಮುಡಾರು: ಮದ್ಯವ್ಯಸನಿ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ, ಜೂ. 5:ಕಾರ್ಕಳ ತಾಲೂಕಿನ ಮುಡಾರು ಗ್ರಾಮದಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಡಾರು ನಿವಾಸಿ ಹರೀಶ್ ದೇವಾಡಿಗ(42) ಆತ್ಮಹತ್ಯೆ ಮಾಡಿಕೊಂಡವರು. ಅವರಿಗೆ ಕಳೆದ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ವಿಪರೀತ ಕುಡಿತದ ಚಟ ಹೊಂದಿದ್ದ…

ಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕಾರ್ಕಳ,ಜೂ.5:ಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಡಿ.ಎನ್. ಅವರು ಭಾಗವಹಿಸಿ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ…

ಎನ್‌ಐಎಫ್‌ಟಿ ಪರೀಕ್ಷಾ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜು ಕಾರ್ಕಳದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

ಕಾರ್ಕಳ,ಜೂ.05: NIFT (National institute of fashion technology) ನಲ್ಲಿ ಬಿ,ಡಿಸೈನ್ ಮತ್ತು ಫ್ಯಾಶನ್ ಟೆಕ್ನಾಲಜಿ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆದ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. ದೇಶದ ಪ್ರತಿಷ್ಠಿತ ಓIಈಖಿ ಕೇಂದ್ರಗಳಲ್ಲಿ ನಾಲ್ಕು…

ಕಾರ್ಕಳ ಪೆರ್ವಾಜೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ: ನೂತನ ಅಧ್ಯಕ್ಷರಾಗಿ ರಘುನಾಥ ಪೂಜಾರಿ ಆಯ್ಕೆ

ಕಾರ್ಕಳ, ಜೂ.05: ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ರಘುನಾಥ ಪೂಜಾರಿ ಆಯ್ಕೆಯಾಗಿದ್ದಾರೆ. ಸಮಿತಿಯ ಗೌರವಾಧ್ಯಕ್ಷರಾಗಿ ರಾಘವೇಂದ್ರ ಪೆರ್ವಾಜೆ ,ಉಪಾಧ್ಯಕ್ಷರಾಗಿ ಸುರೇಶ್ ಸುವರ್ಣ, ಕಾರ್ಯದರ್ಶಿಯಾಗಿ ಪ್ರಸನ್ನ ರಾವ್,…

ಗ್ರಾಮ ಪಂಚಾಯಿತಿ ಚುನಾವಣೆಗೆ ಸರ್ಕಾರದ ಪೂರ್ವಸಿದ್ಧತೆ : ವಾರ್ಡುಗಳ ರಚನೆ, ಮೀಸಲಾತಿ ನಿಗದಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ: ಇನ್ನುಮುಂದೆ ವಿಧಾನಸಭಾ ಮತಗಟ್ಟೆಗಳೇ ಪಂಚಾಯಿತಿ ವಾರ್ಡುಗಳು

ಬೆಂಗಳೂರು,ಜೂ.05: ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಮುಕ್ತಾಯಗೊಂಡು 4 ತಿಂಗಳು ಕಳೆದಿದ್ದು, ಶೀಘ್ರವೇ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಪೂರ್ವಸಿದ್ಧತೆಗೆ ಮುಂದಾಗಿದೆ. ಈ ಕುರಿತು ವಾರ್ಡ್ಗಳ ವಿಂಗಡಣೆ ಹಾಗೂ ವಿವಿಧ ವರ್ಗಗಳ ಸದಸ್ಯ ಸ್ಥಾನಗಳ ಮೀಸಲಾತಿ ನಿಗದಿಪಡಿಸುವ ಕುರಿತು ಸರ್ಕಾರ…