
ಕಾರ್ಕಳ,ಜು.14: ಬೆಳಗ್ಗೆ ಎದ್ದು ಗಾರೆ ಕೆಲಸಕ್ಕೆ ಹೋಗಿ ಮೈಮುರಿದು ತನ್ನ ಪತ್ನಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಗಂಡ ಹಾಗೂ ಚಿನ್ನದಂತಹ ಇಬ್ಬರು ಪುಟ್ಟ ಮಕ್ಕಳಿದ್ದರೂ ಎಲ್ಲವನ್ನೂ ಬಿಟ್ಟು ಪರಸಂಗದ ಚಟಕ್ಕೆ ಬಿದ್ದು ಮಹಿಳೆಯೊಬ್ಬಳು ತನ್ನ ಊರಿನ ಯುವಕನ ಜೊತೆ ಮನೆ ಬಿಟ್ಟು ಎಸ್ಕೇಪ್ ಆಗಿ ಈಗ ಗಂಡನ ಮನೆಯವರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಗಂಗಾವತಿಯ ಭಾಗ್ಯ ಎಂಬ 22 ವಯಸ್ಸಿನ ವಿವಾಹಿತೆ ಆಕೆಯ ಪತಿ ಬಳ್ಳಾರಿಯ ಕುರುಗೋಡಿನ ಬಸವರಾಜ ಹಾಗೂ ಇಬ್ಬರು ಪುಟ್ಟ ಮಕ್ಳಳನ್ನು ಬಿಟ್ಟು ಊರಿನ ಪರಿಚಿತ ಯುವಕ ಪರಸಪ್ಪÀ ಜೊತೆ ಮನೆಬಿಟ್ಟು ಕಾರ್ಕಳಕ್ಕೆ ಓಡಿ ಬಂದ ಮಹಿಳೆ. ಭಾಗ್ಯಳಿಗೆ ಕಳೆದ 5 ವರ್ಷಗಳ ಹಿಂದೆ ಬಳ್ಳಾರಿಯ ಕುರುಗೋಡಿನ ಯುವಕ ಬಸವರಾಜ ಎಂಬವನ ಜೊತೆ ವಿವಾಹವಾಗಿತ್ತು. ಬಸವರಾಜ ಮದುವೆಯಾದ ಬಳಿಕ ತನ್ನ ಪತ್ನಿ ಹಾಗೂ ಅತ್ತೆ ಮಾವನ ಜೊತೆ ಬೆಂಗಳೂರಿನ ರಾಮನಗರಕ್ಕೆ ಕೆಲಸಕ್ಕೆ ಬಂದಿದ್ದ. ಗಾರೆ ಮೇಸ್ತಿçಯಾಗಿ ದುಡಿಯುತ್ತಿದ್ದ ಬಸವರಾಜ ಪತ್ನಿ, ಅತ್ತೆ ಮಾವ ಹಾಗೂ ಇಬ್ಬರನ್ನು ಪುಟ್ಟ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಮದುವೆಯಾದ ಆರಂಭದಲ್ಲಿ ಪತಿಯೊಂದಿಗೆ ಚೆನ್ನಾಗಿದ್ದ ಪತ್ನಿ ಭಾಗ್ಯಳಿಗೆ ಇಬ್ಬರು ಮಕ್ಕಳಾದ ಬಳಿಕ ತನ್ನೂರು ಗಂಗಾವತಿಯ ಯುವಕ ಪರಸಪ್ಪÀನ ಪರಿಚಯವಾಗಿತ್ತು,
ಇವರಿಬ್ಬರ ಪರಿಚಯ ಪ್ರೇಮಕ್ಕೆ ತಿರುಗಿದ ಪರಿಣಾಮ ಭಾಗ್ಯಳಿಗೆ ಮದುವೆಯಾದ ಕೇವಲ 5 ವರ್ಷಕ್ಕೆ ಪತಿ ಹಾಗೂ ಮಕ್ಕಳೇ ಬೇಡವಾಗಿದ್ದರು. ಯುವಕನ ಬಣ್ಣದ ಮಾತಿಗೆ ಮರುಳಾದ ಭಾಗ್ಯ ತನ್ನ ಗಂಡ ಮಕ್ಕಳು ಹಾಗೂ ತಂದೆ ತಾಯಿಯನ್ನು ಬಿಟ್ಟು ಕಳೆದ ಶುಕ್ರವಾರ ಗಂಡನ ಮನೆಯಿಂದ ಲವರ್ ಜೊತೆ ಪರಾರಿಯಾಗಿದ್ದಳು. ಈಕೆಯ ಪ್ರಿಯಕರ ಪರಸಪ್ಪ ಈ ಹಿಂದೆ ಕಾರ್ಕಳದಲ್ಲಿ ಕಲ್ಲು ಕೋರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಪರಿಚಯದ ವ್ಯಕ್ತಿಯ ಮೂಲಕ ಬಾಡಿಗೆ ಮನೆಯಲ್ಲಿ ವಾಸವಿದ್ದ. ತನ್ನ ಪತ್ನಿ ಭಾಗ್ಯ ಮನೆಯಿಂದ ನಾಪತ್ತೆಯಾಗಿದ್ದರಿಂದ ಗಾಬರಿಯಾದ ಪತಿ ಬಸವರಾಜ ಪತ್ನಿಗಾಗಿ ಹುಡುಕಾಟ ನಡೆಸಿದ್ದ. ಬಳಿಕ ಭಾಗ್ಯಳ ಪ್ರಿಯಕರ ಪರಸಪ್ಪನ ಅಣ್ಣ ಈ ಹಿಂದೆ ಕಾರ್ಕಳದಲ್ಲಿ ಕೆಲಸ ಮಾಡಿಕೊಂಡಿದ್ದ, ಆತನ ಮೂಲಕ ಇವರಿಬ್ಬರು ಕಾರ್ಕಳದಲ್ಲಿ ವಾಸವಿರುವುದು ಗೊತ್ತಾಗಿದೆ. ಬಳಿಕ ಪತಿ ಬಸವರಾಜ ತನ್ನಿಬ್ಬರು ಪುಟ್ಟ ಮಕ್ಕಳು ಹಾಗೂ ಆತನ ಅತ್ತೆ ಮಾವನ ಜೊತೆ ಕಾರ್ಕಳಕ್ಕೆ ಬಂದಿದ್ದ.
ಬಸವರಾಜನ ಪತ್ನಿಯ ನಾಪತ್ತೆ ಪ್ರಕರಣ ಕಾರ್ಕಳ ನಗರ ಠಾಣೆಗೂ ತಲುಪಿತ್ತು. ಪೊಲೀಸರು ಭಾಗ್ಯ ಹಾಗೂ ಆಕೆಯ ಪ್ರಿಯಕರನನ್ನು ಠಾಣೆಗೆ ಕರೆಯಿಸಿ ಭಾಗ್ಯಳಿಗೆ ಗದರಿಸಿ ಬುದ್ಧಿವಾದ ಹೇಳಿದರೂ ಆಕೆ ತಾನು ಪ್ರಿಯಕರನನ್ನು ಬಿಡಲು ಸಿದ್ದಳಿಲ್ಲ, ಇತ್ತ ತಮ್ಮ ಪರಸಪ್ಪ ಮಾಡಿದ ಘನಂದಾರಿ ಕೆಲಸಕ್ಕೆ ಸಿಟ್ಟಿಗೆದ್ದ ಆತನ ಮನೆಯವರು ಆಕೆಯನ್ನು ಬಿಡುವಂತೆ ಪರಿಪರಿಯಾಗಿ ಹೇಳಿದರೂ ಆತ ಬಿಡಲು ಸಿದ್ದನಿಲ್ಲ, ಪೊಲೀಸರು ಆತನಿಗೆ ಬುದ್ದಿ ಹೇಳಿದರೂ ಆತ ಬುದ್ದಿಮಾತು ಕೇಳಲು ಒಪ್ಪದಿದ್ದಾಗ ಆತನ ಮನೆಯವರೇ ನಾಲ್ಕು ಏಟು ಬಿಗಿದು ಕರೆದೊಯ್ದರು. ಭಾಗ್ಯಳನ್ನು ಠಾಣೆಯಲ್ಲಿ ಕೂರಿಸಿದ ಪೊಲೀಸರು ಸಂಸಾರದ ಹೊಣೆಗಾರಿಕೆ ಕುರಿತು ಬುದ್ಧಿವಾದ ಹೇಳಿದರು. ಕೊನೆಗೂ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡು ಇನ್ನುಮುಂದೆ ತಾನು ಪತಿ ಹಾಗೂ ಮಕ್ಕಳ ಜೊತೆ ಸಂಸಾರ ನಡೆಸುವುದಾಗಿ ಹೇಳಿದ ಬಳಿಕ ಪ್ರಕರಣ ಸುಖ್ಯಾಂತ ಕಂಡಿತು.




.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
