
ಕಾರ್ಕಳ, ಜು.14:ಮಗ ಮಾಡಿದ ಎಡವಟ್ಟಿಗೆ ಆನ್ ಲೈನ್ ವಂಚಕರು ಆತನ ತಂದೆಯ ಬ್ಯಾಂಕ್ ಖಾತೆಯಿಂದ ಸಲೀಸಾಗಿ ಎಗರಿಸಿರುವ ಪ್ರಕರಣ ಅಜೆಕಾರಿನಲ್ಲಿ ನಡೆದಿದೆ. ಅಜೆಕಾರಿನ ರತ್ನಾಕರ ಅಮೀನ್ ಎಂಬವರು ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 6.83 ಲಕ್ಷಕ್ಕೂ ಮಿಕ್ಕಿ ಹಣ ಕಳೆದುಕೊಂಡಿದ್ದಾರೆ.
ಜು.5ರAದು ಈ ವಂಚನೆ ಪ್ರಕರಣ ನಡೆದಿದ್ದು, ಅಂದು ಮಧ್ಯಾಹ್ನ ರತ್ನಾಕರ ಅಮೀನ್ ಅವರ ಮಗ ಮೊಬೈಲ್ ನಲ್ಲಿ ಆಟವಾಡುತ್ತಿದ್ದ ವೇಳೆ ವಾಟ್ಸಾಪ್ ಮೂಲಕ ನಿಮ್ಮ ವಾಹನವು ಟ್ರಾಫಿಕ್ ನಿಯಮಾವಳಿ ಉಲ್ಲಂಘಿಸಿದ್ದು ದಂಡ ಪಾವತಿಸುವಂತೆ RTO ಚಲನ್ ಹೆಸರಿನಲ್ಲಿ APK ಡಾಕ್ಯುಮೆಂಟ್ ಫೈಲ್ ಬಂದಿತ್ತು. ಆದರೆ ವಂಚನೆಯ ಜಾಲ ಅರಿಯದ ಮಗ ಅದನ್ನು ಓಪನ್ ಮಾಡಿ ಆರ್‌ಟಿಓ ಚಲನ್ ಬಂದಿದೆ ಎಂದು ತಂದೆ ರತ್ನಾಕರ ಅಮೀನ್ ಗೆ ತಿಳಿಸಿದ್ದ. ಇದಾದ ಬಳಿಕ ಜು.5ರಂದು ರಾತ್ರಿ 9 ಗಂಟೆಗೆ ವಂಚಕ ಮತ್ತೆ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಿ, ಬ್ಯಾಂಕ್ ಖಾತೆ ಸಂಖ್ಯೆ, ಪಿನ್ ನಂಬರ್ ಹಾಗೂ ಗೂಗಲ್ ಪಿನ್ ಬದಲಾಯಿಸಿ ಇಲ್ಲವಾದರೆ ನಿಮ್ಮ ಹಣ ಡೆಬಿಟ್ ಆಗುತ್ತದೆ ಎಂದು ತಿಳಿಸಿದ್ದ. ನಂತರ ರತ್ನಾಕರ ಅಮೀನ್ ಅವರು ಅಜೆಕಾರಿನ ಯೂನಿಯನ್ ಬ್ಯಾಂಕಿನಲ್ಲಿರುವ ಖಾತೆಯನ್ನು ಅನ್ ಬ್ಲಾಕ್ ಮಾಡಿದ್ದರು. ಇದಾದ ಬಳಿಕ ಜು.12 ರಂದು ಅವರ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗುತ್ತಿದ್ದ ಸಂದೇಶ ಬರಲಾರಂಭಿಸಿ, ವಂಚಕರು ಹಂಹAತವಾಗಿ ಒಟ್ಟು 6,83,599.63 ಹಣ ದೋಚಿರುವುದು ಕಂಡುಬAದಿದೆ. ಬೇರೆಬೇರೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ವಿಚಾರ ಬಯಲಾಗಿದ್ದು, ಈ ಕುರಿತು ರತ್ನಾಕರ ಅಮೀನ್ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಮ್ಮ ದೈನಂದಿನ ಜೀವನದಲ್ಲಿ ಮೊಬೈಲ್ ಬಳಸದ ಮನೆಯೇ ಇಲ್ಲ ಎನ್ನಬಹುದು. ಹುಟ್ಟಿದ ಮಗುವಿನಿಂದ ಮುದುಕರ ತನಕವೂ ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಯಾಕೆಂದರೆ ತಂತ್ರಜ್ಞಾನ ಎನ್ನುವುದು ಆ ಮಟ್ಟಕ್ಕೆ ಬೆಳೆದಿದೆ, ತಂತ್ರಜ್ಞಾನ ಬೆಳೆದಂತೆ ಅದಕ್ಕೆ ತಕ್ಕಂತೆ ವಂಚಕರೂ ಕೂಡ ಅಪ್‌ಡೇಟ್ ಆಗುತ್ತಿದ್ದಾರೆ. ಆದ್ದರಿಂದ ಎಚ್ಚರಿಕೆಯಿಂದ ಮೊಬೈಲ್ ಬಳಸಿ, ಬ್ಯಾಂಕ್ ಖಾತೆ ಇತರೇ ಮಾಹಿತಿಗಳಿರುವ ಮೊಬೈಲ್ ಗಳನ್ನು ಮಕ್ಕಳ ಕೈಗೆ ಕೊಡಬೇಡಿ ಹಾಗೂ ಯಾವುದೇ ಸಂದೇಶ ಬಂದರೂ ಅದನ್ನು ಪರಿಶೀಲಿಸದೇ ಓಪನ್ ಮಾಡಿ ವಂಚನೆಗೆ ಒಳಗಾಗಬೇಡಿ ಎನ್ನುವುದು ನಮ್ಮ ಆಶಯ.




.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
