
ಕಾರ್ಕಳ,ಅ.07: ತಾವು ಕೆಲಸ ಮಾಡುತ್ತಿದ್ದ ಜಾಗದ ಗೋಡೌನ್ನಿಂದಲೇ ಸಾವಿರಾರು ರೂ. ಮೌಲ್ಯದ ಅಡಿಕೆಯನ್ನು ಕೆಲಸಗಾರರೇ ಕಳವುಗೈದಿರುವ ಪ್ರಕರಣ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ನಡೆದಿದೆ.
ಮಿಯ್ಯಾರಿನ ರಮೇಶ್ ಶೆಟ್ಟಿ ಅವರು ತನ್ನ ಮನೆಯ ಬಳಿಯ ಅಡಿಕೆ ಗೋಡೌನ್ನಲ್ಲಿ ಇರಿಸಿದ್ದ ಸುಮಾರು 95,000 ರೂ. ಮೌಲ್ಯದ 2 ಕ್ವಿಂಟಾಲ್ ಸಿಪ್ಪೆ ಸುಲಿದಿದ್ದ ಅಡಿಕೆಯನ್ನು ಆ.20 ರಿಂದ ಸೆ.29 ರ ಮಧ್ಯಾವಧಿಯಲ್ಲಿ ಅವರೊಂದಿಗೆ ಕೆಲಸ ಮಾಡಿಕೊಂಡಿದ್ದ ಗಣಪತಿ ಮತ್ತು ಮಂಜುಳಾ ಸೇರಿಕೊಂಡು ಕಳವುಗೈದಿದ್ದಾರೆ ಎಂದು ರಮೇಶ್ ದೂರು ನೀಡಿದ್ದು, ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
