

ಕಾರ್ಕಳ,ಅ.07: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ ಕಾರ್ಕಳ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ” ಹದಿಹರೆಯದ ಸಮಸ್ಯೆಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು. ಉಡುಪಿ ಡಾ. ಎ. ವಿ. ಬಾಳಿಗಾ ಹಾಸ್ಪಿಟಲ್ ನ ಮನೋವೈದ್ಯರು ಹಾಗೂ ಹಲವಾರು ಮನೋವೈಜ್ಞಾನಿಕ ವಿಷಯಗಳ ಕನ್ನಡ ಲೇಖಕರು ಆಗಿರುವ ಡಾ. ವಿರೂಪಾಕ್ಷ ದೇವರಮನೆ ಉಪನ್ಯಾಸ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ರೊ.ಡಾ. ಭರತೇಶ ಆದಿರಾಜ್, ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ ಮಂಜುನಾಥ ಹೆಗ್ಡೆ, ಪೂರ್ವಾಧ್ಯಕ್ಷರಾದ ರೊ. ಪ್ರಕಾಶ್ ಪೈ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ನಿರುಪಮಾ ಕಾಮತ್ ಸ್ವಾಗತಿಸಿ, ಹಿರಿಯ ಉಪನ್ಯಾಸಕಿಯಾದ ಜಯಶ್ರೀ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಎಲ್ಲಾ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.





.
.
.
.
.
.
.
.
.
.
.
.
.
.
.
.
.
.
.
.
