

ಕಾರ್ಕಳ,ನ.22: ಬೈಕಿಗೆ ಕ್ರೇನ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ದೊಡ್ಡಪಲ್ಕೆ ಕ್ರಾಸ್ ಬಳಿ ಶನಿವಾರ ರಾತ್ರಿ ನಡೆದಿದೆ.
ಅಜೆಕಾರು ಬೊಂಡುಕುಮೇರಿ ನಿವಾಸಿ ಲೋಕೇಶ್ ಕುಲಾಲ್ (36) ಮೃತಪಟ್ಟ ದುರ್ದೈವಿ ಯುವಕ. ಲೋಕೇಶ್ ಅವರು ಶನಿವಾರ ರಾತ್ರಿ 9 ಗಂಟೆಯ ವೇಳೆಗೆ ತಮ್ಮ ಬೈಕಿನಲ್ಲಿ ಅಜೆಕಾರಿನಿಂದ ಮನೆ ಕಡೆಗೆ ಹೋಗುತ್ತಿದ್ದಾಗ, ದೊಡ್ಡಪಲ್ಕೆ ಬಳಿ ಎದುರುಗಡೆಯಿಂದ ಅಜೆಕಾರು ಕಡೆಗೆ ಅತೀವೇಗವಾಗಿ ಹೋಗುತ್ತಿದ್ದ ಕ್ರೇನ್ ತೀರಾ ಬಲಬದಿಗೆ ಬಂದು ಬೈಕಿಗೆ ಡಿಕ್ಕಿಯಾಗಿದೆ. ಅಪಘಾತದಿಂದ ಲೋಕೇಶ್ ಬೈಕ್ ಸಹಿತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೂ ಅಪಘಾತವೆಸಗಿದ ಕ್ರೇನ್ ಚಾಲಕ ಕ್ರೇನ್ ನಿಲ್ಲಿಸದೆ ಪರಾರಿಯಾಗಿದ್ದಾನೆ.ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಯುವಕನ ಪರಿಚಯಸ್ಥರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಲೋಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
