

ಕಾರ್ಕಳ,ನ.21: ಇಕೋ ಕಾರಿಗೆ ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನ.20 ಶುಕ್ರವಾರ ಈ ಅಪಘಾತ ಸಂಭವಿಸಿದ್ದು, ಸುಕೇಶ್ ಕುಲಾಲ್ ಎಂಬವರು ತನ್ನ ಇಕೋ ಕಾರಿನಲ್ಲಿ ಸುರತ್ಕಲ್ ಗೆ ಹೋಗಿ ಬೆಳ್ಮಣ್ ಮಾರ್ಗವಾಗಿ ಕಾರ್ಕಳಕ್ಕೆ ಬರುತ್ತಿದ್ದಾಗ ನಿಟ್ಟೆ ಗ್ರಾಮದ ದೂಪದಕಟ್ಟೆ, ಅತ್ತೂರು ಚರ್ಚ್ ದ್ವಾರದ ಎದುರುಗಡೆ ಹಾದು ಹೋಗಿರುವ ಬೆಳ್ಮಣ್-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಅತ್ತೂರು ಚರ್ಚ್ ಕಡೆಯಿಂದ ದೂಪಕಟ್ಟೆಯ ಮುಖ್ಯರಸ್ತೆಗೆ ಸ್ಕೂಟರ್ ಸವಾರ ಯಾವುದೇ ಸೂಚನೇ ಇಲ್ಲದೇ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಹಾಗೂ ಸಹಸವಾರ ಇಬ್ಬರೂ ಗಾಯಗೊಂಡಿದ್ದು, ಕಾರ್ಕಳ ಟಿ.ಎಂ.ಎ ಪೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊAಡಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
