
ಜೈಪುರ,ನ.16: ರಾಜಸ್ಥಾನದಲ್ಲಿ ರೈಲ್ವೆ ಹಳಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಪ್ರೀತಿ, ಮಾದಕ ವಸ್ತುಗಳ ಕಳ್ಳಸಾಗಣೆ, ಅಕ್ರಮ ಶಸ್ತ್ರಾಸ್ತ್ರ ಮತ್ತು ಪಾಕಿಸ್ತಾನ ಮೂಲದ ಕ್ರಿಮಿನಲ್ ಜಾಲದ ಸಂಪರ್ಕಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ. ಈ ಪ್ರಕರಣದಲ್ಲಿ ಪಂಜಾಬ್ನ 12ನೇ ತರಗತಿ ಓದಿರುವ ಮಹಾಕ್ದೀಪ್ ಕೌರ್ ಮತ್ತು ದೇವಿಂದರ್ ಸಿಂಗ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನವೆAಬರ್ 3ರಂದು ರಾಜಸ್ಥಾನದಲ್ಲಿ ರೈಲ್ವೆ ಹಳಿಯೊಂದರಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿತ್ತು. ಈ ಸ್ಫೋಟದ ಹಿಂದೆ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ‘ಶಾ’ ಎಂಬಾತನ ಕೈವಾಡವಿದೆ ಎಂದು ಶಂಕಿಸಲಾಗಿದೆ. ಆತನ ಸೂಚನೆಯಂತೆ ಮಹಾಕ್ದೀಪ್ ಕೌರ್ ದೇವಿಂದರ್ ಸಿಂಗ್ ಎಂಬವನೊAದಿಗೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾಳೆ. ಇವರಿಗೆ ರಾಜಸ್ಥಾನಕ್ಕೆ ತೆರಳಿ ರೈಲು ಹಳಿಯಲ್ಲಿ ಐಇಡಿ ಇರಿಸಲು 1 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪAಜಾಬ್ನ ಗುರುದಾಸ್ಪುರ ಜಿಲ್ಲೆಯ ದೋಸ್ತಪುರ ಗ್ರಾಮದ ಮಹಾಕ್ದೀಪ್ ಕೌರ್ ಕುಟುಂಬದ ಕೆಲವು ಸದಸ್ಯರು ಈಗಾಗಲೇ ಗಡಿಯಾಚೆಗಿನ ಕಳ್ಳಸಾಗಣೆ ಜಾಲದ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.ಮಹಾಕ್ದೀಪ್ ಮಾಜಿ ಪತಿ ಕರಣ್ದೀಪ್ ಸಿಂಗ್ ಮತ್ತು ಸೋದರಸಂಬAಧಿ ಪಾಕಿಸ್ತಾನ ಮೂಲದ ಕಳ್ಳಸಾಗಣೆದಾರರೊಂದಿಗೆ ಸಂಪರ್ಕದಲ್ಲಿದ್ದರು. ಆಕೆಯ ಸಹೋದರ ಕೂಡ ಮಾದಕ ವಸ್ತುಗಳಿಗೆ ಸಂಬAಧಿಸಿದ ಮತ್ತೊಂದು ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ ಎಂದು ವರದಿಯಾಗಿದೆ. ಆಕೆಯ ಸೋದರಸಂಬAಧಿಗೂ ಪಾಕಿಸ್ತಾನ ಮೂಲದ ಕಳ್ಳಸಾಗಣೆದಾರರ ಸಂಪರ್ಕವಿತ್ತು ಎಂಬ ಆರೋಪವಿದೆ.
ಈ ಪ್ರಕರಣದಲ್ಲಿ ದೇವಿಂದರ್ ಸಿಂಗ್ ಎಂಬ ಯುವಕನ ಪಾತ್ರವೂ ಪ್ರಮುಖವಾಗಿದೆ. ದೇವಿಂದರ್ ಕುಟುಂಬದ ಪ್ರಕಾರ, ಬಂಧನಕ್ಕೂ ಸುಮಾರು ಮೂರು ತಿಂಗಳ ಮೊದಲು ಮಹಾಕ್ದೀಪ್ ಆತನಿಗೆ ಪರಿಚಯವಾಗಿದ್ದಳು. ಇಬ್ಬರ ನಡುವೆ ಪ್ರೇಮ ಸಂಬAಧ ಬೆಳೆದಿತ್ತು. ಮಹಾಕ್ದೀಪ್ ಮದುವೆಯಾಗುವುದಾಗಿ ಭರವಸೆ ನೀಡಿ ಆತನನ್ನು ತನ್ನ ಸಂಬAಧಕ್ಕೆ ಸೆಳೆದಿದ್ದಳು. ನಂತರ ಆತನನ್ನು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದು, ಪೊಲೀಸರು ಸತ್ಯಾಸತ್ಯತೆಯ ತನಿಖೆ ನಡೆಸುತ್ತಿದ್ದಾರೆ.
ತನಿಖೆಯಲ್ಲಿ ಮಹಾಕ್ದೀಪ್ ಮತ್ತು ದೇವಿಂದರ್ ಸಿಂಗ್ ಸ್ಫೋಟಕ್ಕೂ ಮುನ್ನ ಅಕ್ಟೋಬರ್ 3 ಮತ್ತು 4ರಂದು ಶ್ರೀಗಂಗಾನಗರ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ಸ್ಫೋಟಕಗಳನ್ನು ನೀಡಿದ್ದಾನೆ ಎನ್ನಲಾಗಿದೆ. ರೈಲ್ವೆ ಹಳಿಯ ಬಳಿ ಇರಿಸಿದ್ದ ಸ್ಫೋಟಕ ಸಿಡಿಯದೆ ವಿಫಲವಾಗಿತ್ತು. ಅಕ್ಟೋಬರ್ 12ರಂದು ಎರಡನೇ ಬಾರಿ ರಾಜಸ್ಥಾನಕ್ಕೆ ಭೇಟಿ ನೀಡಿದ್ದರು. ಅಕ್ಟೋಬರ್ 30ರ ನಂತರ ಮೂರನೇ ಬಾರಿ ರಾಜಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅದೇ ಹೋಟೆಲ್ನಲ್ಲಿ ತಂಗಿದ್ದರು. ಹೋಟೆಲ್ ಮಾಲೀಕರಿಂದ ಬೈಕ್ ಪಡೆದು ರೈಲ್ವೆ ಹಳಿಯ ಬಳಿ ಐಇಡಿ ಇರಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಾರಿ ಸ್ಫೋಟ ಸಂಭವಿಸಿತ್ತು. ಈ ಮೂರು ಭೇಟಿಗಳ ಉದ್ದೇಶ, ಸ್ಫೋಟಕಗಳನ್ನು ಎಲ್ಲಿಂದ ತರಲಾಗಿತ್ತು ಮತ್ತು ಅವುಗಳನ್ನು ಯಾರು ರೈಲ್ವೆ ಹಳಿಯಲ್ಲಿ ಇರಿಸಿದ್ದರು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
