Share this news

ಕಾರ್ಕಳ, ನ.14: ನಾವು ಭಾರತದ ಸಂವಿಧಾನ ಒಪ್ಪಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಸಂವಿಧಾನದ ಪರಿಚ್ಛೇದ 14 ಹಾಗೂ 21ರ ಪ್ರಕಾರ ಕಟ್ಟಕಡೆಯ ವ್ಯಕ್ತಿಗೂ ಸರಿಯಾದ ಸಮಯದಲ್ಲಿ ನ್ಯಾಯ ಸಿಗಬೇಕು ಎನ್ನುವ ಆಶಯವಿದೆ.ಸಮಾಜದ ಎಲ್ಲಾ ವರ್ಗಗಳ ಜನ ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆ ಆಗಲಿದೆ ಎಂದು ಹೈಕೋರ್ಟ್ ವಕೀಲ, ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕ ಪ್ರೇಮ್‌ಪ್ರಸಾದ್ ಶೆಟ್ಟಿ ಹೇಳಿದರು.

ಅವರು ಶನಿವಾರ ಕಾರ್ಕಳದಲ್ಲಿ ನಡೆದ ಕರಾವಳಿಗೆ ಪ್ರತ್ಯೇಕ ಹೈಕೋರ್ಟ್ ಪೀಠ ಸ್ಥಾಪನೆಗೆ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿ, ಕರಾವಳಿ ಜಿಲ್ಲೆಗಳು ರಾಜ್ಯಕ್ಕೆ ಅತೀ ಹೆಚ್ಚು ತೆರಿಗೆ ನೀಡುವ ಪೈಕಿ ಎರಡನೇ ಸ್ಥಾನದಲ್ಲಿದೆ,ಆದರೆ ಈ ಭಾಗದ ಜನರು ನ್ಯಾಯಕ್ಕಾಗಿ ಬೆಂಗಳೂರಿನ ಹೈಕೋರ್ಟಿಗೆ 400 ಕಿಮೀ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಅತೀ ವೇಗವಾಗಿ ಬೆಳೆಯುವ ಜಿಲ್ಲೆಗಳಲ್ಲಿ ಕರಾವಳಿಯ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳು ದೇಶದಲ್ಲೇ ಅಗ್ರಸ್ಥಾನದಲ್ಲಿದ್ದು, 18 ಸಾವಿರ ಪ್ರಕರಣಗಳು ನಮ್ಮ ಜಿಲ್ಲೆಗಳಿಂದ ಹೈಕೋರ್ಟ್ ನಲ್ಲಿದ್ದು ಆದ್ದರಿಂದ ತ್ವರಿತ ನ್ಯಾಯದಾನಕ್ಕಾಗಿ ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಯ ಅಗತ್ಯತೆಯಿದೆ ಎಂದರು.
1985 ರಲ್ಲಿ ಜಸ್ಟೀಸ್ ಜಸ್ವಂತ್ ಸಿಂಗ್ ವರದಿ ಪ್ರಕಾರ, ಮುಖ್ಯ ನ್ಯಾಯಪೀಠ ತುಂಬಾ ದೂರದಲ್ಲಿದ್ದರೆ ಹತ್ತಿರದಲ್ಲಿ ಹೈಕೋರ್ಟ್ ಸಂಚಾರಿ ನ್ಯಾಯಪೀಠ ಸ್ಥಾಪಿಸಬಹುದು. ಜಸ್ವಂತ್ ಸಿಂಗ್ ವರದಿ ಅನ್ವಯ ಮೂಲಭೂತ ಸೌಕರ್ಯಗಳ ಮಾನದಂಡಗಳನ್ನು ಕರಾವಳಿ ಜಿಲ್ಲೆಗಳು ಹೊಂದಿದ್ದು ನಮ್ಮ ಹೋರಾಟಕ್ಕೆ ಬಲ ನೀಡಲಿದೆ. ಇದರ ಜೊತೆಗೆ ವಕೀಲಿಕೆ ನಡೆಸಲು ಸಮರ್ಪಕ ವಕೀಲ ವೃಂದವು ಇರಬೇಕು ಎನ್ನುವ ಮಾನದಂಡದ ಪ್ರಕಾರ ಕರಾವಳಿಗೆ ಹೈಕೋರ್ಟ್ ಪೀಠ ಸ್ಥಾಪನೆಗೆ ಅರ್ಹವಾಗಿದೆ ಎಂದರು.
ಪ್ರತ್ಯೇಕ ಹೈಕೋರ್ಟ್ ಪೀಠ ಸ್ಥಾಪನೆಯ ಬೇಡಿಕೆಗಳು ಬಂದ ಸಂದರ್ಭದಲ್ಲಿ ಅದನ್ನು ನಿರ್ಧರಿಸುವ ಅಧಿಕಾರ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗಿದ್ದು, ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿಗಳು ತ್ರಿ ಸದಸ್ಯ ಸಮಿತಿ ರಚಿಸಿದ್ದು ನಮ್ಮ ಹೋರಾಟಕ್ಕೆ ಬಲ ನೀಡಲಿದೆ ಎಂದರು. ಇದಲ್ಲದೇ ಪ್ರಸ್ತುತ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಕನಿಷ್ಠ 300 ವರ್ಷ ಬೇಕು ಎಂಬ ನೀತಿ ಆಯೋಗವು ಆಘಾತಕಾರಿ ವರದಿ ನೀಡಿದ್ದು ಪ್ರತ್ಯೇಕ ಪೀಠ ಸ್ಥಾಪನೆಯ ತುರ್ತು ಅವಶ್ಯಕತೆಯಿದೆ ಎಂದರು.
ವಕೀಲರಾದ ರವೀಂದ್ರ ಮೊಯ್ಲಿ ಮಾತನಾಡಿ, ಕರಾವಳಿಗೆ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂಬುದೊAದೇ ನಮ್ಮ ಹೋರಾಟದ ಉದ್ದೇಶ. ಈ ಹೋರಾಟ ಕೇವಲ ವಕೀಲರಿಗೆ ಸೀಮಿತವಾಗಿಲ್ಲ. ವಿವಿಧ ಸಂಘ-ಸAಸ್ಥೆಗಳು, ವಕೀಲರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕೈಜೋಡಿಸಬೇಕು. ಇದು ಜನಸಾಮಾನ್ಯರಿಗೂ ಅಗತ್ಯವಾಗಿರುವ ಹೋರಾಟವಾಗಿದೆ. ಕರಾವಳಿ ಭಾಗದ ಜನರಿಗೆ ನ್ಯಾಯದಾನ ವ್ಯವಸ್ಥೆ ಇನ್ನಷ್ಟು ಸುಲಭವಾಗಿ, ತ್ವರಿತವಾಗಿ ದೊರೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಮುನಿಯಾಲು ಉದಯ ಶೆಟ್ಟಿ ಮಾತನಾಡಿ,ಕರಾವಳಿ ಭಾಗದಲ್ಲಿ ತುಂಡು ಭೂಮಿಗೆ ಸಂಬAಧಿಸಿದ ಸಿವಿಲ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಪ್ರಕರಣಗಳ ವಿಚಾರಣೆ ತ್ವರಿತವಾಗಿ ನಡೆದು ಜನಸಾಮಾನ್ಯರಿಗೆ ಶೀಘ್ರ ನ್ಯಾಯ ದೊರೆಯುವಂತಾಗಬೇಕು. ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಕರಾವಳಿ ಭಾಗದ ಜನರಿಗೆ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಲು ಅನುಕೂಲವಾಗಲಿದೆ. ಕರಾವಳಿ ಭಾಗದಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪನೆಗೆ ಅಗತ್ಯವಾದ ಸಾಮರ್ಥ್ಯ ಮತ್ತು ನ್ಯಾಯಸಮ್ಮತ ಬೇಡಿಕೆಯಿದೆ. ಆದ್ದರಿಂದ ಕರಾವಳಿಯಲ್ಲಿ ಹೈಕೋರ್ಟ್ ಪೀಠ ರಚನೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಕಳ ಬಾರ್ ಅಸೋಸಿಯೇಷನ್ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕರಿಗಳು ಹಾಜರಿದ್ದರು.

 

 

 

 

 

 

 

 

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *