

ಕೋಲ್ಕತ್ತಾ,ಅ.14: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಕೋಲ್ಕತ್ತಾದ ಕಾಲಿಘಾಟ್ನಲ್ಲಿರುವ ಅವರ ನಿವಾಸದ ಮುಂಭಾಗದಲ್ಲೇ ಮಹಿಳೆಯೊಬ್ಬಳು ಹಲ್ಲೆ ನಡೆಸಲು ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ ಎಂದು TMC ಮುಖಂಡರು ಆರೋಪಿಸಿದ್ದಾರೆ. ಈ ಘಟನೆಯು ಮಮತಾ ಬ್ಯಾನರ್ಜಿ ಅವರ ಭದ್ರತಾ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದುರ್ಗಾಪೂಜಾ ಪೆಂಡಾಲ್ ಉದ್ಘಾಟನೆಗೆ ತೆರಳಲು ಮಮತಾ ಬ್ಯಾನರ್ಜಿ ಮನೆಯಿಂದ ಹೊರಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಹಿಳೆಯೊಬ್ಬಳು ಅವರ ಸನಿಹಕ್ಕೆ ಬಂದು ಕಾಲಿಗೆ ಹೊಡೆಯಲು ಯತ್ನಿಸಿದ್ದಲ್ಲದೆ, ಅವರ ಸೀರೆಯನ್ನು ಎಳೆದಿದ್ದಾಳೆ. ಅಷ್ಟೇ ಅಲ್ಲದೆ, ಆ ಮಹಿಳೆಯ ಬಳಿ ಚಾಕು ಇತ್ತು ಎಂದೂ ಕುನಾಲ್ ಘೋಷ್ ಗಂಭೀರವಾಗಿ ಆರೋಪಿಸಿದ್ದಾರೆ. ತಕ್ಷಣ ಎಚ್ಚೆತ್ತ ಟಿಎಂಸಿ ಕಾರ್ಯಕರ್ತರು ಆಕೆಯನ್ನು ಹಿಡಿದು ಕಾಲಿಘಾಟ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯಸಭಾ ಸಂಸದೆ ಡೋಲಾ ಸೇನ್ ಅವರು ಕಾಲಿಘಾಟ್ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಉನ್ನತ ಮಟ್ಟದ ಭದ್ರತೆ ಹೊಂದಿರುವ ನಾಯಕಿ ಸಾರ್ವಜನಿಕ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ, ಅಪರಿಚಿತ ಮಹಿಳೆಯೊಬ್ಬಳು ಅಷ್ಟು ಹತ್ತಿರಕ್ಕೆ ಬರಲು ಹೇಗೆ ಸಾಧ್ಯವಾಯಿತು ಎಂದು ಅವರು ದೂರಿನಲ್ಲಿ ಪ್ರಶ್ನಿಸಿದ್ದು, ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ದಾಳಿಯ ಯತ್ನ ಹಾಗೂ ಅದರ ಹಿಂದಿನ ಸನ್ನಿವೇಶಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. TMC ಮುಖಂಡರು ಮಾಡಿರುವ ಆರೋಪಗಳು ಮತ್ತು ಮಹಿಳೆಯ ಉದ್ದೇಶದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.






.
.
.
.
.
.
.
.
.
.
.
.
.
.
.
.
.
.
.
.
