

ಕಾರ್ಕಳ,ನ.26: ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿ ಮನೆಯ ಬೀಗ ಮುರಿದ ಕಳ್ಳರು ಸುಮಾರು ನಗದು ಸಹಿತ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿರುವ ಪ್ರಕರಣ ಬೆಳಕಿಗೆ ಬಂದಿದೆ.
ನ. 26 ರಂದು ಸಾಣೂರಿನ ಪದ್ಮನಾಭ ನಗರದ ಗಣೇಶ ಪೈ ಎಂಬವರ ಮನೆಯ ಬೀಗ ಮುರಿದ ಕಳ್ಳರು ಮಲಗುವ ಕೋಣೆಯಲ್ಲಿದ್ದ ಕಪಾಟಿನ ಬೀಗ ಮುರಿದು ಅದರಲ್ಲಿದ್ದ 1,00,000 ರೂ. ನಗದು ಸೇರಿದಂತೆ 1 ಪವನ್ ತೂಕದ ಚಿನ್ನದ ಸರ -1, 2. 4 ಪವನ್ ತೂಕ ಚಿನ್ನದ (ಕೈ ಬಳೆ) ಕಡಗ-1, 3. 7 ಗ್ರಾಂ ತೂಕದ ಉಂಗುರ-1, 4. 1 ಗ್ರಾಂ ತೂಕದ ಚಿನ್ನದ ನಾಣ್ಯ-1 ಒಟ್ಟು ಸುಮಾರು 5,00,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






.
.
.
.
.
.
.
.
.
.
.
.
.
.
.
.
.
.
.
.
