

ಕಾರ್ಕಳ,ನ.24: ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಪ್ರಯೋಗಾಲಯದ ಕೊಠಡಿಯ ಬೀಗ ಮುರಿದ ಕಳ್ಳರು ಲ್ಯಾಪ್ಟಾಪ್, ಟಿವಿ ಸಹಿತ ಇನ್ನಿತರ ಉಪಕರಣಗಳನ್ನು ಕಳವುಗೈದಿರುವ ಪ್ರಕರಣ ಬೆಳಕಿಗೆ ಬಂದಿದೆ.
ನ.21 ರಂದು ಮಧ್ಯಾಹ್ನ ಶಾಲಾ ಮುಖ್ಯಸ್ಥರಾದ ಮಲ್ಲಿಕಾ ಕೆ.ಜಿ ಅವರು ಕೊಠಡಿಗೆ ಬೀಗ ಹಾಕಿ ಹೋಗಿದ್ದು, ಮರುದಿನ ನ.23 ರಂದು ಬೆಳಿಗ್ಗೆ ಶಾಲೆಗೆ ಮರಳಿ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ,ಲ್ಯಾಪ್ ಟಾಪ್,ಟಿ ವಿ ಹಾಗೂ ಇತರ ವಿದ್ಯುತ್ ಉಪಕರಣ ಸೇರಿದಂತೆ ಒಟ್ಟು 30,000 ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






.
.
.
.
.
.
.
.
.
.
.
.
.
.
.
.
.
.
.
.
