

ನವದೆಹಲಿ,ನ.27: ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯನ್ನು ಸಮತೋಲನಗೊಳಿಸುವ ಉದ್ದೇಶದಿಂದ ಕೇಂದ್ರ ವಿದ್ಯುತ್ ಸಚಿವಾಲಯವು ‘ಟೈಮ್ ಆಫ್ ದಿ ಡೇ’ ಎಂಬ ನೂತನ ದರ ನಿಗದಿ ಪದ್ಧತಿಯನ್ನು ಪರಿಚಯಿಸಲು ಮುಂದಾಗಿದೆ. ಹೊಸ ನಿಯಮದ ಪ್ರಕಾರ ವಿದ್ಯುತ್ ಬೇಡಿಕೆಗನುಗುಣವಾಗಿ ದಿನದಲ್ಲಿ ಬೇರೆ ಬೇರೆ ಸ್ಲಾಟ್ಗಳನ್ನು ನಿಗದಿಪಡಿಸಿ, ಈ ಅವಧಿಯಲ್ಲಿ ಬೇರೆ ಬೇರೆ ಶುಲ್ಕಗಳನ್ನು ನಿಗದಿಪಡಿಸಲಾಗುತ್ತದೆ. ಇದರಿಂದ ರಾತ್ರಿ ವೇಳೆ ಬಳಸುವ ವಿದ್ಯುತ್ಗೂ ದಿನದ ಅವಧಿಯಲ್ಲಿ ಬಳಸುವ ವಿದ್ಯುತ್ಗೂ ವಿಧಿಸುವ ಶುಲ್ಕದಲ್ಲಿ ವ್ಯತ್ಯಾಸವಿರಲಿದೆ. ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ಬಳಸುವ ವಿದ್ಯುತ್ಗೆ ಹೆಚ್ಚು ಹಾಗೂ ಕಡಿಮೆ ಬೇಡಿಕೆಯ ಅವಧಿಯಲ್ಲಿ ಬಳಸುವ ವಿದ್ಯುತ್ಗೆ ಕಡಿಮೆ ಶುಲ್ಕ ವಿಧಿಸಲು ಈ ನಿಯಮ ಅವಕಾಶ ಮಾಡಿಕೊಡಲಿದೆ.
ಈ ಕುರಿತ ಕರಡು ನಿಯಮಾವಳಿ ಈಗಾಗಲೇ ಸಿದ್ಧವಾಗಿದ್ದು, ಏ.1, 2027ರಿಂದ ಅನುಷ್ಠಾನಕ್ಕೆ ಬರಲಿದೆ. 2029ರ ಏಪ್ರಿಲ್ನಿಂದ ಬಹುತೇಕ ಎಲ್ಲಾ ಗ್ರಾಹಕರನ್ನು ಈ ನಿಯಮದಡಿ ತರುವ ಗುರಿ ಹೊಂದಲಾಗಿದೆ. ಹೊಸ ನಿಯಮದಂತೆ ನೀವು ಮತ್ತು ನಿಮ್ಮ ಮನೆಯ ಪಕ್ಕದವರು ಸಮಾನ ಯುನಿಟ್ನಷ್ಟೇ ವಿದ್ಯುತ್ ಬಳಸಿದರೂ ವಿದ್ಯುತ್ ಶುಲ್ಕ ಮಾತ್ರ ಬೇರೆ ಬೇರೆ ರೀತಿಯಾಗಿ ಬರಲಿದೆ.ಸೋಲಾರ್ನಂಥ ನವೀಕೃತ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸುವವರು ಏ.1, 2028ರಿಂದ ವಿದ್ಯುತ್ ಸಂಗ್ರಹಿಸುವ ಅಗತ್ಯವೂ ಸೃಷ್ಟಿಯಾಗಲಿದೆ ಎನ್ನಲಾಗಿದೆ.
ಈ ನಿಯಮಾವಳಿಯಿಂದಾಗಿ ಹೆಚ್ಚಿನ ಬೇಡಿಕೆ ಇರುವ ಅವಧಿಯಲ್ಲಿ ಬಳಸುವ 50 ಯುನಿಟ್ ವಿದ್ಯುತ್ಗೂ ಕಡಿಮೆ ಬೇಡಿಕೆ ಇರುವ ಅವಧಿಯಲ್ಲಿ ಬಳಸುವ 50 ಯುನಿಟ್ ವಿದ್ಯುತ್ಗೂ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ. ಈ ಮೂಲಕ ವಾಷಿಂಗ್ ಮೆಷಿನ್, ವಾಟರ್ ಪಂಪ್ಗಳ ಬಳಕೆ, ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್ನAಥ ಕಾರ್ಯಗಳನ್ನು ಗ್ರಾಹಕರು ಕಡಿಮೆ ಬೇಡಿಕೆಯ ಅವಧಿಯಲ್ಲಿ ಕೈಗೊಳ್ಳಲು ಸರ್ಕಾರ ಉತ್ತೇಜನ ನೀಡಲಿದೆ.






.
.
.
.
.
.
.
.
.
.
.
.
.
.
.
.
.
.
.
.
