

ಬೆಂಗಳೂರು,ನ.26: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆಗಳಲ್ಲಿ ಅಕ್ರಮಗಳ ಆರೋಪ ಕೇಳಿ ಬಂದ ಬೆನ್ನಲ್ಲೆ ಕೆಇಎ ಎಲ್ಲ ಪರೀಕ್ಷೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಕಠಿಣ ನಿಯಮ ಅನುಸರಿಸಿದೆ. ಕೆಇಎ ನೇಮಕಾತಿ ಪರೀಕ್ಷೆಗಳ ಹಾಜರಾತಿಗೆ ಇನ್ನು ಮುಂದೆ ಕ್ಯೂ ಆರ್ ಕೋಡ್ ಮೂಲಕವೇ ಅಭ್ಯರ್ಥಿಗಳ ಹಾಜರಾತಿ ಹಾಗೂ ನೈಜತೆ ಪತ್ತೆಹಚ್ಚಲು ತೀರ್ಮಾನಿಸಲಾಗಿದೆ. ಈ ಸಂಬAಧ ಹೊಸ ವಿಶೇಷ ಮೊಬೈಲ್ ಆಪ್ ಅನ್ನು ಸಹ ಪರಿಚಯಸಿದೆ.
ಹೊಸ ತಂತ್ರಜ್ಞಾನ ಆಧಾರಿತ ಪರಿಶೀಲನಾ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಸಂಬAಧ ಪರೀಕ್ಷಾ ಮೇಲ್ವಿಚಾರಕರಿಗೆ ತರಬೇತಿ ನೀಡುವ ಸಲುವಾಗಿ ಪ್ರಾಧಿಕಾರದ ವತಿಯಿಂದ ಗುರುವಾರ ವರ್ಚುವಲ್ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಕೆಇಎ ಆಡಳಿತಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಹಾಗೂ ಪರೀಕ್ಷಾ ನಿಯಂತ್ರಕಿ ಅರ್ಚನಾ ಅವರು ಮೇಲ್ವಿಚಾರಕರಿಗೆ ತಪಾಸಣಾ ವಿಧಾನಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು.
ಪರೀಕ್ಷಾ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಲು ಪ್ರಾಧಿಕಾರವು ಇತ್ತೀಚೆಗೆ ಪ್ರತಿ ಪರೀಕ್ಷಾ ಕೊಠಡಿಗೆ ತಲಾ ಇಬ್ಬರು ಮೇಲ್ವಿಚಾರಕರನ್ನು ನೇಮಿಸಲು ತೀರ್ಮಾನಿಸಿದೆ. ಈ ಇಬ್ಬರಲ್ಲಿ ಒಬ್ಬರನ್ನು ಕ್ಯೂಆರ್ ಕೋಡ್ ಮೂಲಕ ಅಭ್ಯರ್ಥಿಗಳ ತಪಾಸಣೆ ನಡೆಸುವ ಜವಾಬ್ದಾರಿಗೆ ನಿಯೋಜಿಸಲಾಗಿದೆ. ಪರೀಕ್ಷೆಯ ಮೊದಲ ಬೆಲ್ ಆಗುವವರೆಗೆ ಇವರು ತಪಾಸಣಾ ಕಾರ್ಯದಲ್ಲಿ ನೆರವಾಗಲಿದ್ದು, ಆ ಬಳಿಕ ಪರೀಕ್ಷಾ ವೀಕ್ಷಕರ ನೇತೃತ್ವದಲ್ಲಿ ಮುಂದಿನ ಪರೀಕ್ಷಾ ಪ್ರಕ್ರಿಯೆಗಳು ನಡೆಯಲಿವೆ ಎಂದು ಕೆಇಎ ಸ್ಪಷ್ಟಪಡಿಸಿದೆ.






.
.
.
.
.
.
.
.
.
.
.
.
.
.
.
.
.
.
.
.
