Share this news

ಬೆಂಗಳೂರು,ನ.28: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಭಾರೀ ಬದಲಾವಣೆ ಮಾಡಲಾಗಿದ್ದು, ವಿವಿಧ ಜಿಲ್ಲೆಗಳು ಹಾಗೂ ಪೊಲೀಸ್ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್) ಮತ್ತು ಡಿವೈಎಸ್‌ಪಿ (ಸಿವಿಲ್) ಅಧಿಕಾರಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ಸ್ಥಳಗಳಿಗೆ ನಿಯುಕ್ತಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ

ರಾಜ್ಯದ ವಿವಿಧ ಪೊಲೀಸ್ ಠಾಣೆಗಳು, ಸಿಐಡಿ, ಕರ್ನಾಟಕ ಲೋಕಾಯುಕ್ತ, ರಾಜ್ಯ ಗುಪ್ತವಾರ್ತೆ, ಆಂತರಿಕ ಭದ್ರತಾ ವಿಭಾಗ, ಸೈಬರ್ ಕ್ರೈಂ ವಿಭಾಗ ಸೇರಿದಂತೆ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್‌ಗಳಿಗೆ ಹೊಸ ಸ್ಥಳಗಳನ್ನು ನಿಗದಿಪಡಿಸಲಾಗಿದೆ.ವರ್ಗಾವಣೆಗೊಂಡಿರುವ ಎಲ್ಲಾ ಅಧಿಕಾರಿಗಳನ್ನು ಸಂಬAಧಪಟ್ಟ ಘಟಕಾಧಿಕಾರಿಗಳು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಧಿಕಾರಿಗಳು ಯಾವುದೇ ನಿಯುಕ್ತಿಗೊಳಿಸಲಾದ ಹೊಸ ಸ್ಥಳದಲ್ಲಿ ತಕ್ಷಣವೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. 

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸತೀಶ್ ಎಂ.ಪಿ ಸೈಬರ್ ಕ್ರೈಂ ಠಾಣೆ, ಮಂಗಳೂರು ನಗರದಿಂದ ಕಾರ್ಕಳ ವೃತ್ತ, ಉಡುಪಿ ಜಿಲ್ಲೆಗೆ,ಪ್ರಸಾದ್ ಪನ್ನೇಕರ್ ಕೆ ಕರ್ನಾಟಕ ಲೋಕಾಯುಕ್ತದಿಂದ ಸಿದ್ದಾಪುರ ಠಾಣೆ, ಉತ್ತರ ಕನ್ನಡ ಜಿಲ್ಲೆಗೆ, ಸೀತಾರಾಮ್ ಜೆ.ಬಿ ಸಿದ್ದಾಪುರ ಠಾಣೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ, ಯೋಗೇಶ್ ಕೆ.ಎಂ ಲೋಕಾಯುಕ್ತ ವರ್ಗಾವಣೆ ಆದೇಶದಲ್ಲಿದ್ದ ಇವರನ್ನು ಡಿ.ಎಸ್.ಬಿ, ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ಶಂಕರ್ ನಾಯ್ಕ ಜಿ.ಕೆ: ಡಿ.ಎಸ್.ಬಿ, ಚಿಕ್ಕಮಗಳೂರಿಗೆ ವರ್ಗಾವಣೆ ಆದೇಶದಲ್ಲಿದ್ದ ಇವರನ್ನು ಎಸ್.ಸಿ.ಆರ್.ಬಿ ಬೆಂಗಳೂರಿಗೆ, ರೇವಣ್ಣ ಬೇಲೂರು ಠಾಣೆ, ಹಾಸನ ಜಿಲ್ಲೆಯಿಂದ ಡಿಸಿಆರ್‌ಬಿ, ಹಾಸನ ಜಿಲ್ಲೆಗೆ, ವಿನಯ್ ಇ.ವಿ ಡಿಸಿಆರ್‌ಬಿ, ಹಾಸನ ಜಿಲ್ಲೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ, ಶಿವಪ್ರಸಾದ್ ವಿ ಲೋಕಾಯುಕ್ತ ವರ್ಗಾವಣೆ ಆದೇಶದಲ್ಲಿದ್ದ ಇವರನ್ನು ಮಹಿಳಾ ಠಾಣೆ, ಮಂಗಳೂರು ನಗರಕ್ಕೆ, ರಾಘವೇಂದ್ರ ಹಳಗೋದಿ ವಿಟ್ಟೋಭಾ ಡಿ.ಸಿ.ಆರ್.ಇ ಘಟಕದಿಂದ ಹಿಂದಿರುಗಿ ಸ್ಥಳ ನಿರೀಕ್ಷಣೆಯಲ್ಲಿದ್ದ ಇವರನ್ನು ಸೈಬರ್ ಕ್ರೈಂ ಠಾಣೆ, ದಕ್ಷಿಣ ಕನ್ನಡ ಜಿಲ್ಲೆಗೆ, ಸುನೀಲ್ ಹೆಚ್.ಬಿ ರಾಜ್ಯ ಗುಪ್ತವಾರ್ತೆಗೆ ನಿಯುಕ್ತಿ ಆದೇಶದಲ್ಲಿದ್ದ ಇವರನ್ನು ಸೈಬರ್ ಕ್ರೈಂ ಠಾಣೆ, ಕೊಡಗು ಜಿಲ್ಲೆಗೆ ಹಾಗೂ ಓಂಪ್ರಕಾಶ್ ಗೌಡ ಬಿ ರಾಜ್ಯ ಗುಪ್ತವಾರ್ತೆಗೆ ನಿಯುಕ್ತಿ ಆದೇಶದಲ್ಲಿದ್ದ ಇವರನ್ನು ಸೈಬರ್ ಕ್ರೈಂ ಠಾಣೆ, ಹಾಸನ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *