

ನವದೆಹಲಿ,ಅ.14: ಫೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ ಮೇಲೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ್ದ ಒಮಾನ್ ಮೂಲದ ಸಹಪೈಲಟ್ ಹಮಾಮ್ ಉಗ್ರರ ನಂಟು ಹೊಂದಿದ್ದ ಇಬ್ಬರು ಪೈಲಟ್`ಗಳನ್ನು ಯುಎಇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನುವ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.ವಶಕ್ಕೆ ಪಡೆದ ಇಬ್ಬರು ಪೈಲಟ್ ಗಳು ಫೈದುಬೈ ವಿಮಾನದ ಪೈಲಟ್ಗಳಾಗಿ ಇತ್ತೀಚೆಷ್ಟೇ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ.
ಪೈಲಟ್ ಸ್ಮಿತ್ ಮಚ್ಛರ್ ಮೇಲೆ ಚಾಕುವಿನಿಂದ ಇರಿದು ವಿಮಾನ ಪತನಗೊಳಿಸಲು ಯತ್ನಿಸಿ ಪ್ರಕರಣಕ್ಕೆ ಸಂಬAಧಿಸಿದAತೆ ಈ ಘಟನೆಯ ಕುರಿತು ಅದೇ ವಿಮಾನದಲ್ಲಿದ್ದ ಅಸ್ಸಾಫ್ ಎಂಬ ಪ್ರಯಾಣಿಕರು ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ವಿಮಾನದಲ್ಲಿ ಚೂರಿ ಇರಿತದ ಬಳಿಕ ರಕ್ತದ ಮಡಲಲ್ಲಿ ಕುಸಿದು ಬಿದ್ದಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ಗೆ ವಿಮಾನದ ಕೆಲ ಸಿಬ್ಬಂದಿಗಳು ನಿಗೂಢ ಮಾತ್ರೆಗಳನ್ನು ತಿನ್ನಿಸಲು ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪ್ರಮುಖ ಆರೋಪಿ ಒಮಾನ್ ಪೈಲಟ್ಗೆ ವಿಮಾನದ ಇತರ ಸಿಬ್ಬಂದಿ ಕೂಡ ಸಂಪೂರ್ಣವಾಗಿ ಸಹಕರಿಸುತ್ತಿದ್ದರು ಎಂದು ಅಸ್ಸಾಫ್ ತಿಳಿಸಿದ್ದಾರೆ.
ಪ್ರಯಾಣಿಕರ ಹಿಡಿತದಿಂದ ತಪ್ಪಿಸಿಕೊಳ್ಳಲು ಆರೋಪಿಗೆ ಸಿಬ್ಬಂದಿ ನೆರವು ನೀಡಿದ್ದಲ್ಲದೇ, ಈ ಕೃತ್ಯವನ್ನು ಯಾರೂ ಮೊಬೈಲ್ನಲ್ಲಿ ಚಿತ್ರೀಕರಣ ಮಾಡದಂತೆ ತಡೆ ಒಡ್ಡಿದ್ದಾರೆ. ಗಾಯಗೊಂಡು ಅಸ್ವಸ್ಥರಾಗಿದ್ದ ಭಾರತೀಯ ಪೈಲಟ್ ಬಾಯಿಗೆ ನಿಗೂಢ ಮಾತ್ರೆಗಳನ್ನು ಹಾಕಿ ಪರಿಸ್ಥಿತಿಯನ್ನು ಮರೆಮಾಚಲು ಪ್ರಯತ್ನ ನಡೆಸಲಾಗಿತ್ತು ಎಂಬ ಗಂಭೀರ ವಿಚಾರವು ಈಗ ಹೊರಬಂದಿದ್ದು, ತನಿಖೆ ತೀವ್ರಗೊಂಡಿದೆ.






.
.
.
.
.
.
.
.
.
.
.
.
.
.
.
.
.
.
.
.
