ಕಾರ್ಕಳ: ಕುಂಭಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ಜೋಡುರಸ್ತೆ ಕಾರ್ಕಳ ಇದರ ಪ್ರಥಮ ಶಾಖೆಯು ಅಜೆಕಾರಿನ ವಿಜಯಶ್ರೀ ಕಟ್ಟಡದಲ್ಲಿ ಆಗಸ್ಟ್ 20ರಂದು ಭಾನುವಾರ ಶುಭಾರಂಭಗೊAಡಿದೆ.
ನೂತನ ಕಟ್ಟಡವನ್ನು ಸ್ಥಳೀಯ ಉದ್ಯಮಿ ಹಾಗೂ ಸಂಘದ ಕಟ್ಟಡ ಮಾಲಕ ಗೋಕುಲ್ ದಾಸ್ ಪೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರ್ಗಾನ ಲಕ್ಷ್ಮೀಪುರ ಮಹಾಲಕ್ಷ್ಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅಶೋಕ್ ನಾಯಕ್ ಸಂಘದ ಲಾಕರ್ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿ, ಕುಲಾಲ ಸಮಾಜವು ಸಮಾಜದ ಎಲ್ಲಾ ಸಮುದಾಯಗಳೊಂದಿಗೆ ಸಹಬಾಳ್ವೆಯ ಜತೆಗೆ ಸಹಕಾರಿ ಸಂಘ ಸ್ಥಾಪನೆಯ ಮೂಲಕ ಸುಮಾರು 7 ಕೋಟಿ ವಹಿವಾಟು ನಡೆಸಿರುವುದು ಶ್ಲಾಘನೀಯ ಮಾತ್ರವಲ್ಲದೇ ಪ್ರಧಾನ ಕಚೇರಿಗೂ ಸ್ವಂತ ಕಟ್ಟಡ ಹೊಂದುವತ್ತ ಹೆಜ್ಜೆಯಿಟ್ಟಿರುವುದು ಶ್ಲಾಘನೀಯ ಎಂದರು. ಅಜೆಕಾರಿನ ಶಾಖೆಯು ಉತ್ತಮ ವಹಿವಾಟು ನಡೆಸುವ ಮೂಲಕ ಕುಂಭಶ್ರೀ ಸಹಕಾರಿ ಸಂಘವು 100 ಶಾಖೆಗಳನ್ನು ತೆರೆಯುವಂತಾಗಲಿ ಎಂದು ಶುಭಹಾರೈಸಿದರು.
ಮರ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ನಾಯಕ್ ಮಾತನಾಡಿ, ಅಜೆಕಾರಿನ ವಿಜಯಶ್ರೀ ಕಟ್ಟಡದಲ್ಲಿ ತೆರೆಯುವ ಎಲ್ಲಾ ಶಾಖೆಗಳು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊAಡಿದ್ದು, ಕುಂಭಶ್ರೀ ಸಹಕಾರಿ ಸಂಘವು ಉತ್ತಮ ವಹಿವಾಟು ನಡೆಸುವ ಮೂಲಕ ಆದಷ್ಟು ಶೀಘ್ರವಾಗಿ ಸ್ವಂತ ಕಟ್ಟಡ ಹೊಂದುವAತಾಗಲಿ ಎಂದು ಶುಭಹಾರೈಸಿದರು.
ಕುಂಭಶ್ರೀ ವಿವಿದೋದ್ಧೇಶ ಸಂಘ ಕಾರ್ಕಳ ಇದರ ಅಧ್ಯಕ್ಷ ಕೃಷ್ಣ ಮೂಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಕುಕ್ಕುಜೆ, ಹೆಬ್ರಿ ತಾಲೂಕು ಕುಲಾಲ ಸಂಘದ ಅಧ್ಯಕ್ಷ ಸುರೇಂದ್ರ ಕುಲಾಲ್, ಮಾಲತಿ ದಿನೇಶ್ ಕುಲಾಲ್, ಜಯರಾಮ ಬಂಗೇರ, ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷ ಕುಶ ಆರ್ ಮೂಲ್ಯ ,ಜ್ಯೋತಿ ಮೂಲ್ಯ ನಿಟ್ಟೆ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಗ್ರಾಹಕರಿಗೆ ಶೇರ್ ಸರ್ಟಿಫಿಕೇಟ್ ಹಾಗೂ ಠೇವಣಿದಾರರಿಗೆ ಬಾಂಡ್ ಗಳನ್ನು ವಿತರಿಸಲಾಯಿತು.
ದಿವಾಕರ ಬಂಗೇರ ಸ್ವಾಗತಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೃದಯ ಕುಲಾಲ್ ವಂದಿಸಿದರು. ಕಾರ್ಕಳ ತಾಲೂಕು ಕುಲಾಲ ಸಂಘದ ಅಧ್ಯಕ್ಷ ಭೋಜ ಕುಲಾಲ್ ಬೇಳಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.
.