ಅಜೆಕಾರು:ಜಗತ್ತಿನ ಅತ್ಯಂತ ಪುರಾತನ ಧರ್ಮವಾಗಿರುವ ಸನಾತನ ಧರ್ಮದಲ್ಲಿ ಪ್ರತಿಯೊಂದು ಧಾರ್ಮಿಕ ಆಚರಣೆಗೂ ಮಹತ್ವವಿದೆ. ನಮ್ಮ ಧಾರ್ಮಿಕ ಆಚರಣೆಗಳ ಜತೆಗೆ ಧರ್ಮ ಜಾಗೃತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾಡುಹೊಳೆ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ವೇ.ಮೂ ರಾಘವೇಂದ್ರ ಭಟ್ ಹೇಳಿದರು.

ಅವರು ಸೆಪ್ಟೆಂಬರ್ 10 ರಂದು ಅಜೆಕಾರಿನ ದೆಪ್ಪುತ್ತೆ ಅಂಬೇಡ್ಕರ್ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಂಜುಶ್ರೀ ಸ್ಪೋರ್ಟ್ಸ್ ಕ್ಲಬ್ ದೆಪ್ಪುತ್ತೆ ಅಜೆಕಾರು ಇವರ ಸಹಯೋಗದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಧಾರ್ಮಿಕ ಪ್ರವಚನ ನೀಡಿದರು.
ನಾವು ಸಮಾಜದಲ್ಲಿ ಹೇಗೆ ಬದುಕಬೇಕೆಂದು ಧರ್ಮ ಕಲಿಸುತ್ತದೆ, ಭಗವಂತನ ಸ್ಮರಣೆಯೊಂದಿಗೆ ಸತ್ಯ ಮಾರ್ಗದಲ್ಲಿ ನಡೆದವರಿಗೆ ಎಂದಿಗೂ ಸೋಲಾಗದು,ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಮರ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಉದ್ಯಮಿ ನಂದಕುಮಾರ್ ಹೆಗ್ಡೆ ಅಜೆಕಾರ ಸಿಎ ಬ್ಯಾಂಕ್ ನಿರ್ದೇಶಕಿ ವಿದ್ಯಾಪೈ, ನಂದಾದೀಪ ಆಟೋಮೊಬೈಲ್ಸ್ ಮಾಲಕ ಅರುಣ್ ಶೆಟ್ಟಿಗಾರ್, ಮರ್ಣೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್, ಪಂಚಾಯಿತಿ ಸದಸ್ಯೆ ಯಶೋಧಾ ಶೆಟ್ಟಿ, ಮಂಜುಶ್ರೀ ಭಜನಾ ಮಂಡಳಿಯ ಅಧ್ಯಕ್ಷ ತೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ನಿರತರಾದ ಹೇಮ ಹಾಗೂ ವಿಜಯಾ ಕಾಮತ್, ಮರ್ಣೆ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.
ಜ್ಯೋತಿ ಸ್ವಾಗತಿಸಿ,ಸತೀಶ್ ವಂದಿಸಿದರು. ಹರೀಶ್ ನೀರಲ್ಕೆ ಕಾರ್ಯಕ್ರಮ ನಿರೂಪಿಸಿದರು

