ಕಾರ್ಕಳ: ಶರೀರವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಮುದ್ರಾಧಾರಣೆ. ಮುದ್ರಾಧಾರಣೆಯ ಮೂಲಕ ದೇಹದ ನರಕೋಶ ವ್ಯವಸ್ಥೆ ಸುಲಲಿತವಾಗುತ್ತದೆ. ಇಂದಿಗೂ ಕೆಲ ಗ್ರಾಮೀಣ ಭಾಗಗಳಲ್ಲಿ ಕಾಮಾಲೆ ಪೀಡಿತ ರೋಗಿಗಳಿಗೆ ಚೆನ್ನಾಗಿ ಕಾದ ಕಂಚಿನ ಸರಳಿಯಿಂದ ಬರೆ ಹಾಕುವ ಪದ್ಧತಿಯಿದೆ. ಹೀಗೆ ಚೆನ್ನಾಗಿ ಕಾಯಿಸಿದ ಸರಳಿನಿಂದ ಬರೆ ಹಾಕಿದಾಗ ದೇಹದೊಳಗಿನ ಬ್ಯಾಕ್ಟೀರಿಯಾ ನಾಶವಾಗುತ್ತದೆ ಎಂದು ಬಾಳಾಗಾರು ಮಠಾಧೀಶರಾದ ಶ್ರೀ ರಘುಭೂಷಣ ತೀರ್ಥ ಶ್ರೀಪಾದಂಗಳವರು ಹೇಳಿದರು.
ಅವರು ಪ್ರಥಮೈಕಾದಶೀ ಪ್ರಯುಕ್ತ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಗುಡ್ಡೆಯಂಗಡಿ ಶ್ರೀ ಹರಿವಾಯು ಕೃಪಾದಲ್ಲಿ ತಪ್ತಮುದ್ರಾಧಾರಣೆ ನಡೆಸಿ ಮಾತನಾಡಿದರು.
ವಿದ್ವಾನ್ ಶ್ರೀ ರಾಘವೇಂದ್ರ ಭಟ್ ಗುಡ್ಡೆಯಂಗಡಿ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ನೂರಾರು ವಿಪ್ರ ಬಾಂದವರು ಪಾಲ್ಗೊಂಡಿದ್ದರು.