Share this news

ಕಾರ್ಕಳ: ಮರ್ಣೆ ಗ್ರಾಮದ ಅಜೆಕಾರು ಕುರ್ಪಾಡಿ ನಿವಾಸಿ ಗೋಪಾಲ ಪೂಜಾರಿ ಎಂಬವರ ಮಗ ಶ್ರೀನಿವಾಸ ಪೂಜಾರಿ(25) ಎಂಬವರು ತಮ್ಮ ಮನೆಯ ಸಮೀಪದ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

 

ಅಜೆಕಾರಿನ ವೆಲ್ಡಿಂಗ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಶುಕ್ರವಾರ ತಡರಾತ್ರಿ ನೇಣಿಗೆ ಕೊರಳೊಡ್ಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲವಾದರೂ, ಸಾಲಬಾಧೆಯಿಂದ ಮಾನಸಿಕವಾಗಿ ಮನನೊಂದು ಈ ಕೃತ್ಯ ಎಸಗಿರಬಹುದೆಂಬ‌ ಶಂಕೆ ವ್ಯಕ್ತವಾಗಿದೆ.
ಈ‌ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *