
ಕಾರ್ಕಳ, ಫೆ.26: ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಫೇಸ್ ಬುಕ್ ನಲ್ಲಿ ಅತ್ಯಂತ ಕೆಟ್ಟದಾಗಿ ಬಿಂಬಿಸಿ ಪೋಸ್ಟ್ ಹಾಕಿದ ಬಿಂದು ಸಿರ ಎನ್ನುವ ಮಹಿಳೆಯ ವಿರುದ್ಧ ಕಾರ್ಕಳ ಸೇರಿದಂತೆ ಹಲವೆಡೆ ದೂರು ನೀಡಲಾಗಿದ್ದು, ಆಕೆಯ ವಿರುದ್ಧ ಎಫ್ಐಅರ್ ದಾಖಲಾಗಿದೆ.
ಮೋದಿಯವರನ್ನು ಎಪ್ಸ್ಟೈನ್ ಜೊತೆ ಸಂಬAಧ ಕಲ್ಪಿಸಿ ಅವರ ಫೋಟೋ ಎಡಿಟ್ ಮಾಡಿ ಅವರ ದೇಹಕ್ಕೆ ಎಪ್ಸ್ಟೈನ್ ಫೈಲ್ಸ್ ಎನ್ನುವ ಶೀರ್ಷಿಕೆಯುಳ್ಳ ಸುದ್ದಿ ಎಂಬಂತೆ ನ್ಯೂಸ್ ಪೇಪರ್ ಸುತ್ತಲಾಗಿದೆ. ಮಾತ್ರವಲ್ಲದೇ ತಾನು ಬೆತ್ತಲಾಗಿದ್ದು, ಕಾಂಗ್ರೆಸ್ ನವರು ಬೆತ್ತಲಾಗಿದ್ದಾರೆ ಎನ್ನುವ ಮಾತು ಹೇಳುತ್ತಿರುವಂತೆ ಬಿಂಬಿಸಲಾಗಿದೆ. ಇದಲ್ಲದೇ ಫೋಟೋ ಕೆಳಗಡೆ ಪರರ ಹಂಗಿಸುವ ಮುನ್ನ ನಿನ್ನ ನೀ ನೋಡು ಮರ್ಮಜ್ಞ! ಎನ್ನುವ ಬರಹ ಬರೆಯಲಾಗಿದೆ.
ಈ ಪೋಸ್ಟ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಕಾರ್ಕಳದಲ್ಲಿ ಬಿಜೆಪಿ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಎನ್ನುವವರು ಪೋಸ್ಟ್ ಹಾಕಿದ ಬಿಂದು ಸಿರ ವಿರುದ್ಧ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.


.
.
.
.
.
.
.
.
.
.
