Share this news

ಅಜೆಕಾರು: ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಮಲಗಿದ ಸ್ಥಿತಿಯಲ್ಲೇ ಮೃತಪಟ್ಟ ಘಟನೆ ಮರ್ಣೆ ಗ್ರಾಮದ ಅಜೆಕಾರು ಎಂಬಲ್ಲಿ ನಡೆದಿದೆ.
ಕೇರಳ ಮೂಲದ ರಬ್ಬರ್ ಟ್ಯಾಪರ್ ಪಿ.ಕೆ ನಂದಕುಮಾರ್(63) ಮೃತಪಟ್ಟ ವ್ಯಕ್ತಿ. ಕೇರಳದ ಕೊಟ್ಟಾಯಂನ ಗೋಪಾ ಕುಮಾರ್ ಎಂಬವರು ಅಜೆಕಾರಿನ ರಬ್ಬರ್ ತೋಟವನ್ನು ಲೀಸ್ ಆಧಾರದಲ್ಲಿ ಪಡೆದುಕೊಂಡು ನಂದಕುಮಾರ್ ಅವರನ್ನು ಟ್ಯಾಪರ್ ಆಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕಾರ್ಮಿಕ ನಂದಕುಮಾರ್ ಮಂಗಳವಾರ ರಾತ್ರಿ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಇವರ ಸಾವಿಗೆ ನಿಖರ ಕಾರಣವೇನು ಎಂದು ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 
 

 

 
 

 
 

 

 
 

Leave a Reply

Your email address will not be published. Required fields are marked *