ಕಾರ್ಕಳ: ಅಜೆಕಾರು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣೆಯ ಅದ್ದೂರಿ ಶೋಭಾಯಾತ್ರೆ ಏಪ್ರಿಲ್16 ರಂದು ಭಾನುವಾರ ನಡೆಯಿತು.
ಅಜೆಕಾರು ರಾಮ ಮಂದಿರದಿಂದ ಆರಂಭಗೊಂಡ ನೂತನ ರಥ ಸಮರ್ಪಣೆ ಶೋಭಾಯಾತ್ರೆಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಸ್ಯ ಶಿವರಾಮ ಜಿ.ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಜಯ ಶೆಟ್ಟಿ, ಭಾಸ್ಕರ ಶೆಟ್ಟಿ ಕುಂಟಿನಿ, ಜಯಕರ ಶೆಟ್ಟಿ,ಸುಜಯ ಶೆಟ್ಟಿ,ಪ್ರಶಾಂತ ಶೆಟ್ಟಿ, ನಂದಕುಮಾರ್ ಹೆಗ್ಡೆ ಮುಂತಾದವರು ಪಾಲ್ಗೊಂಡಿದ್ದರು.
ಸುಮಾರು 20ಕ್ಕೂ ಅಧಿಕ ಭಜನಾ ತಂಡಗಳು ಹಾಗೂ ಚಂಡೆ ಬಳಗದೊಂದಿಗೆ ವೈಭವದ ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.
ಭಕ್ತಾದಿಗಳಿಗೆ ದಾರಿಯುದ್ದಕ್ಕೂ ಪಾನಕ,ಶರಬತ್ತು ವ್ಯವಸ್ಥೆ ಮಾಡಿದ್ದರು.
ಮೆರವಣಿಗೆ ದೇವಸ್ಥಾನ ತಲುಪಿದ ಬಳಿಕ ಕ್ರೇನ್ ಬಳಸಿ ನೂತನ ರಥವನ್ನು ಇಳಿಸುತ್ತಿದ್ದಂತೆಯೇ ಭಕ್ತಾದಿಗಳು ಹರ್ಷೋದ್ಘಾರ ಕೂಗಿದರು.