ಬೆಂಗಳೂರು : ನಗರದ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಿನ್ನೆ ನಡೆದ ಪಟಾಕಿ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಈ ಕಾರ್ಮಿಕರ ಪೈಕಿ 8 ಮಂದಿ ವಿದ್ಯಾರ್ಥಿಗಳು ಕೂಡ ಬಲಿಯಾಗಿದ್ದು,ಈ ವಿದ್ಯಾರ್ಥಿಗಳು ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆ ಅಮ್ಮಪಟ್ಟಿ ಗ್ರಾಮದವರು ಎಂದು ಮೂಲಗಳಿಂದ ತಿಳಿದುಬಂದಿದೆ.
ಅಮ್ಮಪಟ್ಟಿ ಗ್ರಾಮದ ನಿವಾಸಿಗಳಾದ ಆದಿಕೇಶವನ್ (17) ಗಿರಿ (17) ವೇಡಪ್ಪನ್ (22) ಆಕಾಶ (17) ವಿಜಯ ರಾಘವನ್ (19) ವೆಳಂಬರದಿ (20) ವಿನೋದ್ (18) ಮುನಿವೇಲ್ (19) ಮೃತರು ಎಂದು ಗುರುತಿಸಲಾಗಿದೆ. ಇವರೆಲ್ಲರೂ ವಿದ್ಯಾರ್ಥಿಗಳೆಂದು ಹೇಳಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಾದ ಇವರು ಶೈಕ್ಷಣಿಕ ಶುಲ್ಕ ಕಟ್ಟಲು ಹಣದದ ಸಲುವಾಗಿ ಪಟಾಕಿ ಅಂಗಡಿಗಳಲ್ಲಿ ಕೆಲಸ ಮಾಡಲು ಬಂದಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಮೃತ ವಿದ್ಯಾರ್ಥಿಗಳ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಪಟಾಕಿ ದುರಂತ ಸಂಭವಿಸಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೇ ಇಂದು ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಲಿದ್ದು ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ.