Share this news

ಅನಂತ್ ನಾಗ್ : ಒಂದು ವಾರಗಳ ಕಾಲ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಎಲ್ ಇ ಟಿ ಕಮಾಂಡರ್ ಸೇರಿದಂತೆ ಇಬ್ಬರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.ಈ ಮೂಲಕ 7 ದಿನಗಳ ಕಾಲ ನಡೆದ ಎನ್ ಕೌಂಟರ್ ಅಂತ್ಯವಾಗಿದೆ.

ಎಲ್ಇಟಿ ಕಮಾಂಡರ್ ಉಜೈರ್ ಖಾನ್ ಶವವನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೊಬ್ಬರ ಶವ ಇನ್ನೂ ಪತ್ತೆಯಾಗಿಲ್ಲ .ಶವ ಪತ್ತೆಗಾಗಿ ಶೋಧ ನಡೆಯುತ್ತಿದೆ ಎಂದು ಉನ್ನತ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ.

“ಅನೇಕ ಪ್ರದೇಶಗಳು ಇನ್ನೂ ಉಳಿದಿರುವುದರಿಂದ ಶೋಧ ಕಾರ್ಯಾಚರಣೆ ಮುಂದುವರಿಯುತ್ತದೆ. ಅಲ್ಲಿ ನಮಗೆ 2-3 ಭಯೋತ್ಪಾದಕರ ಬಗ್ಗೆ ಮಾಹಿತಿ ಇತ್ತು. ಶೋಧಕಾರ್ಯ ನಡೆಸಿ ಮೂರನೇ ಶವವನ್ನು ಕೂಡ ಪತ್ತೆ ಮಾಡಲಾಗುವುದು ಎಂದು ಕಾಶ್ಮೀರದ ಎಡಿಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *